ಗೋಲ್ಡನ್‌ ಸುಂದರಿ ಜಾಹ್ನವಿ ಕಪೂರ್‌

| Published : May 12 2024, 01:15 AM IST / Updated: May 12 2024, 08:03 AM IST

ಸಾರಾಂಶ

ಜಾಹ್ನವಿ ಕಪೂರ್ ಅವರ ಹೊಸ ಫೋಟೋಶೂಟ್‌ ಸಾಕಷ್ಟು ಗಮನ ಸೆಳೆಯುತ್ತಿದೆ.

 ಸಿನಿವಾರ್ತೆ

ನಟಿ ಜಾಹ್ನವಿ ಕಪೂರ್‌ ಮತ್ತೊಮ್ಮೆ ತಮ್ಮ ಹಾಟ್‌ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿ ಆಗುತ್ತಿದ್ದಾರೆ. ಈ ಬಾರಿ ತಮ್ಮ ತಾಯಿ ಶ್ರೀದೇವಿ ಅವರನ್ನು ನೆನಪಿಸುವ ಲುಕ್‌ ಒ‍ಗೊಂಡ ಫೋಟೋಶೂಟ್‌ ಮೂಲಕ ಗಮನ ಸೆಳೆದಿದ್ದಾರೆ. 

ನ್ಯೂಡ್ ನೆಟೆಡ್ ಕ್ರೀಮಿ ಗೌನ್‌ನಲ್ಲಿ ಜಾನ್ವಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಈ ಫೋಟೊಗಳನ್ನು ‘ಇನ್‌ ದಿ ಗಾರ್ಡೆನ್‌ ಆಫ್‌ ದಿ ಈಡೆನ್‌’ ಎನ್ನುವ ಕ್ಯಾಪ್ಷನ್ ಕೊಟ್ಟು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ಜಾಹ್ನವಿ ಅವರೇ ಹಂಚಿಕೊಂಡಿದ್ದಾರೆ.

ಜಾಹ್ನವಿ ಕಪೂರ್‌ ಅವರ ಫೋಟೋಗಳನ್ನು ನೋಡಿ ‘ಗೋಲ್ಡನ್‌ ಕ್ವೀನ್‌, ಬಂಗಾರದ ಅಪ್ಸರೆ’ ಎಂದು ಅವರ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಅವರ ಈ ಹೊಸ ಲುಕ್ ‘ಮಿ.ಇಂಡಿಯಾ’ ಚಿತ್ರದ ‘ಹವಾ ಹವಾಯಿ’ ಹಾಡಿನಲ್ಲಿ ಶ್ರೀದೇವಿ ಲುಕ್ ನೆನಪಿಸುತ್ತಿವೆ. ಅಂದಹಾಗೆ ಇತ್ತೀಚೆಗೆ ಚನ್ನೈನಲ್ಲಿರುವ ಶ್ರೀದೇವಿ ಅವರ ಹಳೆಯ ಬಂಗಳೆಯಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಸಂಭ್ರಮ ಹಂಚಿಕೊಂಡಿದ್ದರು.