ಸಾರಾಂಶ
ಸೂರಿಯ ಬಹು ಕಾಲದ ಕನಸು ಕಾಗೆ ಬಂಗಾರ ಸಿಟ್ಟೇರಲು ಸಿದ್ಧವಾಗಿದೆ.
ಸಿನಿವಾರ್ತೆ
ದುನಿಯಾ ಸೂರಿ ನಿರ್ದೇಶನದ ಹೊಸ ಸಿನಿಮಾ ‘ಕಾಗೆ ಬಂಗಾರ’ ಜೂನ್‌ನಲ್ಲಿ ಸೆಟ್ಟೇರುತ್ತಿದೆ. ವಿರಾಟ್ ಹೀರೊ ಆಗಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ಮಾಪಕ ಜಯಣ್ಣ, ‘ಇದೊಂದು ಅದ್ದೂರಿ ಬಜೆಟ್ ಚಿತ್ರ. ಬೆಂಗಳೂರಿನಲ್ಲಿ ದೊಡ್ಡ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದೇವೆ. ಬೇರೆ ಬೇರೆ ಭಾಷೆಗಳ ದೊಡ್ಡ ಕಲಾವಿದರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರು ತಿಂಗಳ ಹಿಂದೆಯೇ ಈ ಸಿನಿಮಾ ಬಗ್ಗೆ ಸೂರಿ ಜೊತೆ ಚರ್ಚೆ ಮಾಡಿದ್ದೆ. ಜೂನ್ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆ. ಕಾಗೆ ಬಂಗಾರ ಟೈಟಲ್ ಅನ್ನು ಸೂರಿ ಬಹಳ ಹಿಂದೆಯೇ ಘೋಷಿಸಿದ್ದರೂ, ಈಗ ಮಾಡುತ್ತಿರುವ ಕತೆ 2024ಕ್ಕೆ ಸರಿಹೊಂದುವಂತಿದೆ’ ಎನ್ನುತ್ತಾರೆ.