ಸಾರಾಂಶ
ಸತ್ಯನಾಥ್ ನಿರ್ದೇಶನ, ಪ್ರಸಾದ್ ವಸಿಷ್ಠ ನಿರ್ಮಿಸಿರುವ ‘ಕಬಂಧ’ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕಿ ಶೈಲಜಾ ನಾಗ್ ಅವರು ಬಿಡುಗಡೆ ಮಾಡಿದರು
ಸಿನಿವಾರ್ತೆ
ಸತ್ಯನಾಥ್ ನಿರ್ದೇಶನ, ಪ್ರಸಾದ್ ವಸಿಷ್ಠ ನಿರ್ಮಿಸಿರುವ ‘ಕಬಂಧ’ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕಿ ಶೈಲಜಾ ನಾಗ್ ಬಿಡುಗಡೆ ಮಾಡಿದರು. ಪ್ರಸಾದ್ ವಸಿಷ್ಠ, ಕಿಶೋರ್, ಅವಿನಾಶ್, ಪ್ರಿಯಾಂಕಾ ಮಳಲಿ, ಯೋಗರಾಜ್ ಭಟ್, ಪ್ರಶಾಂತ್ ಸಿದ್ದಿ, ಛಾಯಾಶ್ರೀ, ಶ್ರುತಿ ನಾಯಕ್ ಚಿತ್ರದಲ್ಲಿ ನಟಿಸಿದ್ದಾರೆ.
ಸತ್ಯನಾಥ್, ‘ಇದು ವ್ಯವಸಾಯದ ಸುತ್ತ ನಡೆಯುವ ಕತೆ. ಇಂದಿನ ಜೀವನಶೈಲಿಯಲ್ಲಿ ಪ್ಲಾಸ್ಟಿಕ್ ಹಾಗೂ ಟಾಕ್ಸಿಕ್ ಅಂಶಗಳು ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದರೂ ನಾವು ಆ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಕಬಂಧ ಎಂಬುದು ರಾಮಾಯಣದಲ್ಲಿ ಬರುವ ಒಬ್ಬ ರಾಕ್ಷಸನ ಹೆಸರು. ಅವನ ಬಾಹುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಅದೇ ರೀತಿ ಈ ವಿಷಕಾರಿ ವಸ್ತುಗಳೆಂಬ ಕಬಂಧ ಬಾಹುಗಳಿಗೆ ಹೇಗೆ ಸಿಕ್ಕಿಕೊಂಡಿದ್ದೇವೆ ಎಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಪ್ರಸಾದ್ ವಸಿಷ್ಠ, ಪ್ರಶಾಂತ್ ಸಿದ್ದಿ, ಪ್ರಿಯಾಂಕಾ ಮಳಲಿ, ಛಾಯಾಗ್ರಾಹಕ ವಿಷ್ಣುಪ್ರಸಾದ್ ಇದ್ದರು.