ಖಾಲಿ ಡಬ್ಬ ಚಿತ್ರದ ಹಾಡು ಬಿಡುಗಡೆ

| Published : Mar 29 2024, 12:47 AM IST

ಖಾಲಿ ಡಬ್ಬ ಚಿತ್ರದ ಹಾಡು ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಪ್ರತಿಭೆಗಳು ಸೇರಿ ಮಾಡಿರುವ ಖಾಲಿ ಡಬ್ಬ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ಹೊಸಬರ ‘ಖಾಲಿ ಡಬ್ಬ’ ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ ವಿ ನಾಗೇಂದ್ರ ಪ್ರಸಾದ್‌ ಬಿಡುಗಡೆ ಮಾಡಿದರು. ಪ್ರಕಾಶ್‌ ಕೆ ಅಂಬ್ಳೆ ನಿರ್ದೇಶನದ ಈ ಚಿತ್ರವನ್ನು ಮಂಜು ಗುರಪ್ಪ ನಿರ್ಮಿಸಿದ್ದಾರೆ. ರಾಮ್‌ ಗುಡಿ ನಾಯಕನಾಗಿ, ಆದ್ಯಾ ಪ್ರಿಯಾ ಹಾಗೂ ಹರಿತಾ ನಾಯಕಿಯರಾಗಿ ನಟಿಸಿದ್ದಾರೆ.

ಪ್ರಕಾಶ್‌ ಕೆ ಅಂಬ್ಳೆ ಮಾತನಾಡಿ, ‘ಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು ಸಮಯ ಮೀರಿದರೆ ಪ್ರತಿಯೊಬ್ಬರ ಜೀವನ ಖಾಲಿ ಡಬ್ಬದಂತೆಯೇ ಎಂದು ಹೇಳುತ್ತಾ ಜೀವನದ ಕತೆಯನ್ನು ತೋರಿಸುವ ಸಿನಿಮಾ ಇದು’ ಎಂದರು.

ಚಿತ್ರಕ್ಕೆ ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದು ಸಂಗೀತ ಮಾಡಿದ್ದಾರೆ. ರಾಮ್‌ ಗುಡಿ ಮಾತನಾಡಿ, ‘ಚಿತ್ರಕ್ಕೆ ಹೆಸರು ಇಟ್ಟಾಗಲೇ ನೆಗೆಟಿವ್‌ ಮಾತುಗಳು ಕೇಳಿ ಬಂದವು. ಆದರೆ, ಇದು ಕತೆಗೆ ಪೂರಕವಾಗಿದೆ. ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಮಾತ್ರ ಜೀವನವೆಂಬ ಡಬ್ಬ ತುಂಬುತ್ತದೆ. ಇಲ್ಲದೆ ಹೋದರೆ ಜೀವನೇ ಖಾಲಿ ಡಬ್ಬ ಆಗುತ್ತದೆ ಎನ್ನುವುದು ಕತೆಯೇ ಥೀಮು’ ಎಂದರು.

ಕುರಿ ಪ್ರತಾಪ್, ಮಜಾಭಾರತ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ ನಾಗೇಂದ್ರ ಪ್ರಸಾದ್ ತಾರಾಬಳಗದಲ್ಲಿದ್ದಾರೆ.