ಕಬಂಧ ಚಿತ್ರದ ಪೋಸ್ಟರ್ ಬಿಡುಗಡೆ

| Published : Apr 05 2024, 01:00 AM IST / Updated: Apr 05 2024, 06:17 AM IST

ಸಾರಾಂಶ

ಕಬಂಧ ಚಿತ್ರದಲ್ಲಿ ನಟಿಸಿರುವ ವಿವಿಧ ಪಾತ್ರಗಳನ್ನು ಪರಿಚಯಿಸುವ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದೆ.

ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಸುಧಾರಾಣಿ ನಟಿಸಿರುವ ‘ಕಬಂಧ’ ಚಿತ್ರದ ಪೋಸ್ಟರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರದಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿಗಳನ್ನು ಪರಿಚಯಿಸುವ ಪೋಸ್ಟರ್‌ ಇದಾಗಿದೆ. ಚಿತ್ರದ ಪ್ರತಿ ಪೋಸ್ಟರ್‌ ಕೂಡ ಕುತೂಹಲ ಮೂಡಿಸುವಂತಿದೆ. ಸತ್ಯನಾಥ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪ್ರಸಾದ್‌ ವಸಿಷ್ಠ, ಪ್ರಿಯಾಂಕ ಮಲಾಲಿ, ಕಿಶೋರ್‌, ಅವಿನಾಶ್‌, ನಿರ್ದೇಶಕ ಯೋಗರಾಜ್‌ ಭಟ್‌, ವಂದನ, ವಚನ, ಪ್ರಶಾಂತ್‌ ಸಿದ್ಧಿ ನಟಿಸಿದ್ದಾರೆ. ವಿಷ್ಣುಪ್ರಸಾದ್‌ ಕ್ಯಾಮೆರಾ, ಸಾಯಿತೇಜ್‌ ಸಂಗೀತ ಚಿತ್ರಕ್ಕಿದೆ. ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.