ಸಾರಾಂಶ
ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಮಕ್ಕಳ ಚಿತ್ರಕ್ಕೆ ಪ್ರಶಸ್ತಿ
ಕನ್ನಡಪ್ರಭ ಸಿನಿವಾರ್ತೆಇತ್ತೀಚೆಗೆ ನಡೆದ ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಚಿಣ್ಣರ ಚಂದ್ರ’ ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ, ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ ಬರಗೂರು ಮೊಮ್ಮಗ ಆಕಾಂಕ್ಷ್ ಬರಗೂರ್‌ಗೆ ಉತ್ತಮ ಬಾಲನಟ ಪ್ರಶಸ್ತಿ ದೊರೆತಿದೆ. ‘ಚಿಣ್ಣರ ಚಂದ್ರ’ ಚಿತ್ರವು ಬರಗೂರರ ‘ಅಡಗೊಲಜ್ಜಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಜಿ.ಎನ್. ಗೋವಿಂದರಾಜು ಈ ಸಿನಿಮಾದ ನಿರ್ಮಾಪಕರು. ಚಿತ್ರದಲ್ಲಿ ನಿಕ್ಷೇಪ್, ಷಡ್ಜ, ಈಶಾನ್, ಅಭಿನವ್ ನಾಗ್, ಸುಂದರರಾಜು, ರೇಖಾ, ವತ್ಸಲಾ ಮೋಹನ್ ನಟಿಸಿದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.