ಆದಿತ್ಯ, ರಂಜನಿ ರಾಘವನ್‌ ನಟನೆಯ ಕಾಂಗರೂ ಸಿನಿಮಾ ನಾಳೆ ಅಂದರೆ ಮೇ3ಕ್ಕೆ ಬಿಡುಗಡೆಯಾಗಲಿದೆ.

 ಸಿನಿವಾರ್ತೆ

ಆದಿತ್ಯ, ರಂಜನಿ ರಾಘವನ್‌ ನಟನೆಯ ‘ಕಾಂಗರೂ’ ಸಿನಿಮಾದ ಟ್ರೇಲರ್‌ ಎ2 ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

‘ಚಿತ್ರ ನಾಳೆ ಅಂದರೆ ಮೇ 3ಕ್ಕೆ 150 ರಿಂದ 200 ಥಿಯೇಟರ್‌ಗಳಲ್ಲಿ ತೆರೆಗೆ ಬರಲಿದೆ. ಯೂಟರ್ನ್‌ ಸಿನಿಮಾದಿಂದ ಪ್ರೇರಿತನಾಗಿ ಈ ಸಿನಿಮಾ ಮಾಡಿದ್ದೇನೆ. ಸಣ್ಣ ತಪ್ಪೊಂದು ಏನೆಲ್ಲ ಅನಾಹುತಗಳಿಗೆ ಕಾರಣವಾಗಬಹುದು ಎಂಬುದು ಚಿತ್ರದಲ್ಲಿದೆ’ ಎಂದು ನಿರ್ದೇಶಕ ಕಿಶೋರ್‌ ಮೇಗಳಮನೆ ಹೇಳಿದ್ದಾರೆ.

ನಾಯಕ ಆದಿತ್ಯ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಜನಿ ಮನೋವೈದ್ಯೆಯಾಗಿ ನಟಿಸಿದ್ದಾರೆ.

ಚೆನ್ನಕೇಶವ ಬಿ.ಸಿ ಹಾಗೂ ಸ್ನೇಹಿತರು ಈ ಸಿನಿಮಾ ನಿರ್ಮಿಸಿದ್ದಾರೆ.