ಸಾರಾಂಶ
ಕಣ್ಣಮುಚ್ಚೇ ಕಾಡೇಗೂಡೇ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದ್ದು, ರಾಘವೇಂದ್ರ ರಾಜ್‌ಕುಮಾರ್ ಅವರು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ರಾಘವೇಂದ್ರ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ʻಕಣ್ಣಾಮುಚ್ಚೆ ಕಾಡೇಗೂಡೇʼ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಈಗಷ್ಟೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಸಿನಿಮಾ. ಅನಿತಾ ವೀರೇಶ್ ಕುಮಾರ್ ಹಾಗೂ ಮೀನಾಕ್ಷಿ ರಾಜಶೇಖರ್ ಚಿತ್ರದ ನಿರ್ಮಾಪಕರು. ನಟರಾಜ್ ಕೃಷ್ಣೇಗೌಡ ನಿರ್ದೇಶನ, ದೀಪಕ್ ಕುಮಾರ್ ಜೆ ಕೆ ಛಾಯಾಗ್ರಹಣ, ಸಂತೋಷ್ ಜೋಶ್ವ, ವಿಜಿತ್ ಕೃಷ್ಣ ಸಂಗೀತ ಇದೆ. ಅಥರ್ವ ಪ್ರಕಾಶ್ ಹಾಗೂ ಪ್ರಾರ್ಥನಾ ಚಿತ್ರದ ಜೋಡಿ.