ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಓಟಿಟಿಯಲ್ಲೂ ಉತ್ತಮ ಗಳಿಕೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈವರೆಗೆ ಸುಮಾರು 22.54 ಕೋಟಿ ರು.ಗೂ ಹೆಚ್ಚು ಕಲೆಕ್ಷನ್‌ ಅನ್ನು ಓಟಿಟಿಯಲ್ಲಿ ಮಾಡಿದೆ.

ಸಿನಿವಾರ್ತೆ

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಓಟಿಟಿಯಲ್ಲೂ ಉತ್ತಮ ಗಳಿಕೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈವರೆಗೆ ಸುಮಾರು 22.54 ಕೋಟಿ ರು.ಗೂ ಹೆಚ್ಚು ಕಲೆಕ್ಷನ್‌ ಅನ್ನು ಓಟಿಟಿಯಲ್ಲಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಸುಮಾರು 7 ಕೋಟಿ ರು.ಗಳಷ್ಟು ಕಲೆಕ್ಷನ್‌

ಕನ್ನಡ ಭಾಷೆಯಲ್ಲಿ ಸುಮಾರು 7 ಕೋಟಿ ರು.ಗಳಷ್ಟು ಕಲೆಕ್ಷನ್‌ ಆಗಿದ್ದರೆ ಹಿಂದಿ ಡಬ್ಬಿಂಗ್‌ ವರ್ಶನ್‌ನಲ್ಲಿ 13.32 ಕೋಟಿ ರು. ಗಳಿಕೆ ಆಗಿದೆ. ತಮಿಳಿನಲ್ಲಿ 1.64 ಕೋಟಿಗಳಷ್ಟು ಕಲೆಕ್ಷನ್‌ ದಾಖಲಾಗಿದೆ.

ನೋಡಿದ ಪ್ರೇಕ್ಷಕರೇ ಈ ಸಿನಿಮಾವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ

ನೋಡಿದ ಪ್ರೇಕ್ಷಕರೇ ಈ ಸಿನಿಮಾವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಓಟಿಟಿಗೆ ರಿಲೀಸ್‌ ಆಗಿದ್ದರೂ ಥೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರಿದಿದೆ. ವೀಕೆಂಡ್‌, ಹಬ್ಬದ ಸಮಯ ಥೇಟರ್‌ನಲ್ಲೂ ಜನ ಮತ್ತೆ ಮತ್ತೆ ಈ ಸಿನಿಮಾ ನೋಡುತ್ತಿದ್ದಾರೆ. ಓಟಿಟಿ ಕಲೆಕ್ಷನ್ನೂ ಸೇರಿ ವಿಶ್ವಾದ್ಯಂತ ಈ ಸಿನಿಮಾದ ಗಳಿಕೆ 880 ಕೋಟಿ ರು.ಗೂ ಹೆಚ್ಚಾಗಿದೆ.