ಸಪ್ತಮಿ ಗೌಡ ಹೊಸ ಸ್ಟ್ರೀಟ್‌ ಫೋಟೋಶೂಟ್ ಮಾಡಿಸಿದ್ದಾರೆ.

 ಸಿನಿವಾರ್ತೆ

‘ಹೊಸ ಚಾಲೆಂಜ್‌ಗಳಿಗೆ ಧೈರ್ಯದಿಂದ ಎದುರಾಗಿ ನಿಲ್ಲುವೆ’ ಎನ್ನುತ್ತಾ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ ‘ಯುವ’ ಬೆಡಗಿ ಸಪ್ತಮಿ ಗೌಡ. ಸ್ಟ್ರೀಟ್ ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿರುವ ಬೆಂಗಳೂರಿನ ಬೀದಿಗಳಲ್ಲಿ ಬಿಂಕದ ನಡಿಗೆಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ತೆಲುಗಿನ ‘ತಮ್ಮುಡು’ ಸಿನಿಮಾದಲ್ಲಿ ನಟಿಸಿರುವ ಈ ನಟಿ, ಹೊಸ ಥಾಟ್‌ ಇರುವ ಸ್ಕ್ರಿಪ್ಟ್‌ಗಳಿಗಾಗಿ ಎದುರು ನೋಡುತ್ತಿದ್ದಾರಂತೆ.