ಶೂಟಿಂಗೇ ಇನ್ನೂ ಶುರುವಾಗಿಲ್ಲ, ಆದರೆ ಕಾಂತಾರ ಪ್ರೀಕ್ವೆಲ್‌ನ ಓಟಿಟಿ ರೈಟ್ಸ್ ಮಾರಾಟವಾಗಿ ಬಿಟ್ಟಿದೆ!

ಕಳೆದ ವರ್ಷ ಬಿಡುಗಡೆಯಾಗಿ ಜಯಭೇರಿ ಬಾರಿಸಿರುವ, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್‌ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ. ಶೂಟಿಂಗ್‌ಗೂ ಮುನ್ನವೇ ಈ ಸಿನಿಮಾದ ಓಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ವೀಡಿಯೋ ಪಡೆದುಕೊಂಡಿದೆ. ಈ ವಿಚಾರವನ್ನು ಅಮೆಜಾನ್‌ ಸೋಷಿಯಲ್‌ ಮೀಡಿಯಾದಲ್ಲಿ ಘೋಷಿಸಿದೆ.

ಇನ್ನೊಂದೆಡೆ ರಿಷಬ್‌ ಶೆಟ್ಟಿ ಅವರ ಊರಿನ ಸಮೀಪ ‘ಕಾಂತಾರ 1’ ಚಿತ್ರೀಕರಣಕ್ಕೆ ಭರದ ಸಿದ್ಧತೆ ನಡೆದಿದೆ. ಅಲ್ಲಿ ಬೃಹತ್‌ ಸೆಟ್‌ ಹಾಕಲಾಗಿದ್ದು, ಸದ್ಯದಲ್ಲೇ ಶೂಟಿಂಗ್‌ ಆರಂಭವಾಗಲಿದೆ. ಹೊಂಬಾಳೆ ಫಿಲಂಸ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.