ಕೆರೆಬೇಟೆ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ

| Published : Mar 04 2024, 01:20 AM IST

ಸಾರಾಂಶ

ಕೆರೆಬೇಟೆ ಚಿತ್ರದ ಶೀರ್ಷೀಕೆ ಗೀತೆಯನ್ನು ಸಂಸದ ಬಿವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ಗೌರಿ ಶಂಕರ್‌ ನಟನೆಯ ‘ಕೆರೆಬೇಟೆ’ ಚಿತ್ರದ ಶೀರ್ಷಿಕೆ ಗೀತೆಯನ್ನು ‍ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಿದ್ದಾರೆ. ‘ಮಳಿ ಆತು ಬೆಳಿ ಆತು ಬ್ಯಾಸಗೀನು ಬ್ಯಾಸರಾತು’ ಎನ್ನುವ ಪಕ್ಕಾ ದೇಸಿ ಸೊಗಡಿನ ಸಾಲುಗಳನ್ನು ಒಳಗೊಂಡ ಈ ಹಾಡನ್ನು ಪ್ರಮೋದ್‌ ಮರವಂತೆ ಬರೆದಿದ್ದು, ಕರಿ ಬಸವ ಹಾಡಿದ್ದಾರೆ. ಎ2 ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಕೇಳಬಹುದು. ಮಾರ್ಚ್‌ 15ರಂದು ಸಿನಿಮಾ ತೆರೆಗೆ ಬರುತ್ತಿದೆ.

ಈ ಕುರಿತು ಗೌರಿಶಂಕರ್‌, ‘ಇದು ಮಲೆನಾಡು, ಸಾಗರ ಭಾಗದ ಕತೆ. ದೇಶಿಯ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ. ಜಾನದ, ಪ್ರೀತಿ ಮತ್ತು ಕೌಟುಂಬಿಕ ಹಿನ್ನೆಲೆಯಲ್ಲಿ ಸಾಗುವ ಹಳ್ಳಿಗಾಡಿನ ಸಾಹಸ ಕ್ರೀಡೆಯನ್ನು ಹೇಳುವ ಸಿನಿಮಾ. ಕೆರೆಬೇಟೆ ಇದುವರೆಗೂ ಯಾರೂ ತೆರೆ ಮೇಲೆ ನೋಡಿರದ ಒಂದು ಕಥನ’ ಎಂದರು.

ಬಿಂದು ಶಿವರಾಮ್‌, ಗೋಪಾಲ ದೇಶಪಾಂಡೆ, ಸಂಪತ್‌ ಮೈತ್ರೇಯ, ಹರಿಣಿ ಶ್ರೀಕಾಂತ್‌, ಚಾರ್ಲಿ ಮಂಜು, ರಾಕೇಶ್‌ ಪೂಜಾರಿ, ವರ್ದನ್‌ ತೀರ್ಥಹಳ್ಳಿ, ವಲ್ಲಭ್‌, ಶೇಖರ್‌ ಕೆ ನಟಿಸಿದ್ದಾರೆ.