ಸಿನಿವಾರ್ತೆ

‘ಕೆಜಿಎಫ್‌ 1’ ಹಾಗೂ ‘ಕೆಜಿಎಫ್‌ 2’ನಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ತಮ್ಮ ಹುಟ್ಟೂರಾದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಭೂತ ಕೋಲದಲ್ಲಿ ಭಾಗವಹಿಸಿದ್ದಾರೆ. ಇಷ್ಟಾರ್ಥ ಈಡೇರಿದರೆ ಕೋಲ ನೀಡುವುದಾಗಿ ಶ್ರೀನಿಧಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ದೈವಗಳಿಗೆ ಕೋಲ ನೀಡಿದ್ದಾರೆ.

ಈ ವೇಳೆ ದೈವಗಳು, ‘ಇನ್ನಷ್ಟು ಎತ್ತರಕ್ಕೆ ಏರುತ್ತೀಯಾ, ಯಶಸ್ಸು ಸಿಗಲಿದೆ’ ಎಂದು ಆಶೀರ್ವದಿಸಿವೆ ಎನ್ನಲಾಗಿದೆ. ಸದ್ಯ ತೆಲುಗಿನ ಒಂದು ಚಿತ್ರ ಹಾಗೂ ಚೇರನ್ ನಿರ್ದೇಶನದ ಸುದೀಪ್‌ ನಟನೆಯ ಚಿತ್ರ ಶ್ರೀನಿಧಿ ಕೈಯಲ್ಲಿವೆ.