ಕೃಷ್ಣ ನೀ ಬೇಗನೇ ಬಾರೋ ಚಿತ್ರಕ್ಕೆ ಮುಹೂರ್ತ

| Published : Feb 22 2024, 01:45 AM IST

ಸಾರಾಂಶ

ಕೃಷ್ಣ ನೀ ಬೇಗನೇ ಬಾರೋ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಚಿತ್ರ ಇದಾಗಿದೆ.

ಕನ್ನಡಪ್ರಭ ಸಿನಿವಾರ್ತೆಪ್ರೇಮಿಗಳ ದಿನದಂದು ‘ಕೃಷ್ಣ ನೀ ಬೇಗನೇ ಬಾರೋ’ ಚಿತ್ರಕ್ಕೆ ಮುಹೂರ್ತ ನಡೆಯಿತು. ನಟರಾದ ಅನೀಶ್‌ ತೇಜೇಶ್ವರ್ ಹಾಗೂ ಇಶಾನ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶುಭ ಕೋರಿದರು. ಎಸ್‌ ನೀಲಕಂಠ, ಚಲಪತಿರಾಜು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಜಿ ಸೂರ್ಯತೇಜ ನಿರ್ದೇಶಿಸಲಿದ್ದಾರೆ.

‘ಗೋಪಿಕೆಯರೇ ಇಲ್ಲದ ಕೃಷ್ಣನ ಜೀವನದಲ್ಲಿ ನಾಲ್ಕು ಮಂದಿ ಹುಡುಗಿಯರ ಪ್ರವೇಶ ಆದ ಮೇಲೆ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದು ನಿರ್ದೇಶಕರು ಹೇಳಿಕೊಂಡರು.

ಭಾರ್ಗವ್‌ ಬಿ ವಿ ನಾಯಕನಾಗಿ, ಊರ್ವಶಿ ಪರದೇಶಿ, ಚೈತ್ರಾ, ಪ್ರಿಯಾಂಕ, ಆಶುರೆಡ್ಡಿ ನಾಯಕಿಯರಾಗಿ ನಟಿಸಲಿದ್ದಾರೆ. ತಾರಾ, ಅಚ್ಯುತ್‌ ಕುಮಾರ್‌, ಬಲರಾಜವಾಡಿ, ಕಬೀರ್‌ ದುಹಾನ್‌ಸಿಂಗ್, ಅಜಯ್‌ ರತ್ನಂ ತಾರಾಬಳಗದಲ್ಲಿದ್ದಾರೆ.