ಸಾರಾಂಶ
ಕುಬುಸ ಚಿತ್ರದ ಟ್ರೈಲರ್ ಬಿಡುಗಡೆ ಇತ್ತೀಚಿಗೆ ನಡೆಯಿತು.
ನಟರಾಜ್ ಎಸ್ ಭಟ್, ಮಂಜಮ್ಮ ಜೋಗತಿ, ಮಹಾಲಕ್ಷ್ಮೀ ನಟಿಸಿರುವ ‘ಕುಬುಸ’ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಹಾಗೂ ಮಂಜಮ್ಮ ಜೋಗತಿ ಬಿಡುಗಡೆ ಮಾಡಿದ್ದರು. ಇಂದು ಆ ಸಿನಿಮಾ ಬಿಡುಗಡೆ ಆಗುತ್ತಿದೆ.
ರಘುರಾಮ್ ಚರಣ್ ನಿರ್ದೇಶನದ ಈ ಚಿತ್ರವನ್ನು ವಿ ಶೋಭ ನಿರ್ಮಿಸಿದ್ದಾರೆ. ಸಾಹಿತಿ ಕುಂ. ವೀರಭದ್ರಪ್ಪ ಕಥೆ ಆಧರಿಸಿದ ಚಿತ್ರ ಇದಾಗಿದೆ. ನಾಯಕ ನಟ ನಟರಾಜ್ ಎಸ್ ಭಟ್, ‘ರಾಮ ರಾಮರೇ ಚಿತ್ರದ ನಂತರ ಮತ್ತೊಂದು ಭಿನ್ನ ಹಾಗೂ ಭರವಸೆಯ ಚಿತ್ರದಲ್ಲಿ ನಟಿಸಿದ್ದೇನೆ. ನೀವೆಲ್ಲ ನೋಡಿ ಬೆಂಬಲಿಸಬೇಕು’ ಎಂದು ಹೇಳಿದ್ದಾರೆ. ಮಹಾಲಕ್ಷ್ಮೀ ನಾಯಕಿಯಾಗಿ ನಟಿಸಿದ್ದಾರೆ.