ಬಿಗ್‌ಬಾಸ್ ರಿಯಾಲಿಟಿ ಶೋನ 12ನೇ ಸೀಸನ್ ಟ್ರೋಫಿ ಗಿಲ್ಲಿ ನಟನ ಮುಡಿಗೇರಿದೆ. ರನ್ನರ್ ಅಪ್ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಶೋನ ನಿರೂಪಕ ನಟ ಕಿಚ್ಚ ಸುದೀಪ್ ಅವರು ವಿಜೇತರ ಹೆಸರನ್ನು ಘೋಷಿಸಿದರು.
ಬೆಂಗಳೂರು : ಬಿಗ್‌ಬಾಸ್ ರಿಯಾಲಿಟಿ ಶೋನ 12ನೇ ಸೀಸನ್ ಟ್ರೋಫಿ ಗಿಲ್ಲಿ ನಟನ ಮುಡಿಗೇರಿದೆ. ರನ್ನರ್ ಅಪ್ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಶೋನ ನಿರೂಪಕ ನಟ ಕಿಚ್ಚ ಸುದೀಪ್ ಅವರು ವಿಜೇತರ ಹೆಸರನ್ನು ಘೋಷಿಸಿದರು.
ವಿಜೇತರಾದ ಗಿಲ್ಲಿ ನಟನಿಗೆ ₹50 ಲಕ್ಷ
ವಿಜೇತರಾದ ಗಿಲ್ಲಿ ನಟನಿಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ವಿಕ್ಟೋರೀಸ್ ಕಾರ್ ಬಹುಮಾನ ದೊರೆಯಿತು. ಸುದೀಪ್ ವೈಯಕ್ತಿಕವಾಗಿ ₹10 ಲಕ್ಷ ಬಹುಮಾನ ನೀಡಿ ಶುಭ ಕೋರಿದರು. ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ₹20 ಲಕ್ಷದ ಗಿಫ್ಟ್ ವೋಚರ್ ಅನ್ನು ನೀಡಲಾಯಿತು. ಗಿಲ್ಲಿ ನಟ ವಿಜೇತರೆಂದು ಘೋಷಣೆ ಆಗುತ್ತಿದ್ದಂತೆಯೇ ಬಿಗ್ ಬಾಸ್ ಶೋ ನಡೆಯುತ್ತಿದ್ದ ಬಿಡದಿಯ ಜಾಲಿವುಡ್ ಬಳಿ ಸೇರಿದ್ದ ಸಾವಿರಾರು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
19 ಸ್ಪರ್ಧಿಗಳಿಂದ ಶುರುವಾಗಿ 111 ದಿನಗಳ ಕಾಲ ನಡೆದ ಶೋ
19 ಸ್ಪರ್ಧಿಗಳಿಂದ ಶುರುವಾಗಿ 111 ದಿನಗಳ ಕಾಲ ನಡೆದ ಕಲರ್ಸ್ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಹೊತ್ತಿಗೆ 6 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದರು. ಈ ಪೈಕಿ ಮೊದಲು ಅಶ್ವಿನಿ ಗೌಡ, ಕಾವ್ಯ, ಮ್ಯೂಟಂಟ್ ರಘು, ಧನುಷ್ ಅವರು ಸರದಿಯಂತೆ ರನ್ನರ್ ಅಪ್ ಆಗಿ ಎಲಿಮಿನೆಟ್ ಆದರು. ಅಂತಿಮ ಸುತ್ತಿನಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಕಣದಲ್ಲಿ ಉಳಿದುಕೊಂಡು, ಕೊನೆಗೆ ರಕ್ಷಿತಾ ಶೆಟ್ಟಿ ಅವರನ್ನು ಹಿಂದಿಕ್ಕಿ ಗಿಲ್ಲಿ ನಟ ಬಿಗ್‌ಬಾಸ್ 12ನೇ ಕಂತಿನ ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ವಿನ್ನರ್ ಪಟ್ಟಕ್ಕೇರಿದರು.


