ಸಾರಾಂಶ
ಲೆಡೀಸ್ ಬಾರ್ ಚಿತ್ರಕ್ಕೆ 25 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಯಶಸ್ಸಿನ ಸಂಭ್ರಮವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿತು
ಕನ್ನಡಪ್ರಭ ಸಿನಿವಾರ್ತೆ
ಟಿ ಎಂ ಸೋಮರಾಜು ನಿರ್ಮಾಣ, ಮುತ್ತು ಎ ಎನ್ ನಿರ್ದೇಶನದ ‘ಲೇಡಿಸ್ ಬಾರ್’ ಚಿತ್ರ 25 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಸಂಭ್ರಮಾಚರಣೆ ಮಾಡಿದೆ. ಕಾರ್ಯಕ್ರಮಕ್ಕೆ ಹಿರಿಯ ನಟ ಅಶೋಕ್ ಆಗಮಿಸಿ ಶುಭ ಹಾರೈಸಿದರು.ನಿರ್ದೇಶಕ ಮುತ್ತು ಎ ಎನ್, ‘ನಮ್ಮ ಸಿನಿಮಾ ತೆರೆಕಂಡಾಗ ತುಂಬಾ ಚಿತ್ರಗಳು ಬಿಡುಗಡೆ ಆಗಿದ್ದವು. ಆದರೂ ನಮ್ಮ ಚಿತ್ರ 25 ದಿನಗಳನ್ನು ಪೂರೈಸಿರುವುದು ನಮ್ಮ ದೊಡ್ಡ ಗೆಲುವು’ ಎಂದರು. ಹರೀಶ್ ರಾಜ್, ಕೆಂಪೇಗೌಡ, ಗಣೇಶ್ ರಾವ್, ಮೀನಾಕ್ಷಿ ಇದ್ದರು.