ಲೇಡೀಸ್ ಬಾರ್‌ ಇಂದು ಬಿಡುಗಡೆ

| Published : Feb 16 2024, 01:46 AM IST

ಸಾರಾಂಶ

ಮಹಿಳೆಯರೇ ಪ್ರಧಾನವಾಗಿ ನಟಿಸಿರುವ ಲೇಡೀಸ್‌ ಬಾರ್ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.

ಮುತ್ತು ಎ ಎನ್ ನಿರ್ದೇಶಿಸಿರುವ ‘ಲೇಡಿಸ್ ಬಾರ್’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ‘ಲೇಡಿಸ್ ಬಾರ್ ಎಂಬ ಶೀರ್ಷಿಕೆ ಕೇಳಿದ ತಕ್ಷಣ ಈ ಸಿನಿಮಾ ಕುಡಿತದ ಬಗ್ಗೆ ಇರಬಹುದು ಅಂದುಕೊಳ್ಳುವುದು ಸಹಜ. ಆದರೆ ನಮ್ಮ ಚಿತ್ರದಲ್ಲಿ ಬರೀ ಕುಡಿತವಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದಾಗ ಅದು ತಿಳಿಯುತ್ತದೆ. ಮಹಿಳೆಯರೇ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು’ ಎಂದು ಚಿತ್ರತಂಡ ಹೇಳಿದೆ. ನಿರ್ಮಾಪಕ ಟಿ ಎಂ ಸೋಮರಾಜ್, ‘ಅತ್ಯುತ್ತಮ ಕಥಾಹಂದರದ ಈ ಚಿತ್ರ ಗೆಲ್ಲುವ ವಿಶ್ವಾಸವಿದೆ’. ವೀನಸ್ ಮೂರ್ತಿ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಜಗ್ಗು ನೃತ್ಯ, ಹರ್ಷ ಕೋಗೋಡ್ ಸಂಗೀತ ನಿರ್ದೇಶನವಿದೆ.