ಸಾರಾಂಶ
ಸಿಎಂ ಸಿದ್ದರಾಮಯ್ಯ ಬದುಕನ್ನಾಧರಿಸಿದ ಲೀಡರ್ ರಾಮಯ್ಯ ಶೂಟಿಂಗ್ ಸ್ಥಗಿತಗೊಂಡಿದೆ.
ಸಿ ಎಂ ಸಿದ್ದರಾಮಯ್ಯ ಅವರ ಜೀವನವನ್ನಾಧರಿಸಿದ, ಸತ್ಯರತ್ನಂ ನಿರ್ದೇಶನದ ‘ಲೀಡರ್ ರಾಮಯ್ಯ’ ಸಿನಿಮಾಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
‘ಸಿಎಂ ಮೇಲಿನ ಮುಡಾ ಹಗರಣ ಆರೋಪದ ಹಿನ್ನೆಲೆ ಹಾಗೂ ನಾಯಕ ಪಾತ್ರ ನಿರ್ವಹಿಸಬೇಕಿದ್ದ ವಿಜಯ ಸೇತುಪತಿ ಡೇಟ್ ಸಮಸ್ಯೆಯಿಂದ ಈ ಸಿನಿಮಾ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ’ ಎಂದು ಈ ಸಿನಿಮಾದ ನಿರ್ಮಾಪಕ ಹಯ್ಯಾತ್ ಪೀರ್ ತಿಳಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಹುಟ್ಟೂರಾದ ಮೈಸೂರಿನ ಆಸುಪಾಸಿನಲ್ಲಿ ಒಂದು ಹಂತದ ಚಿತ್ರೀಕರಣ ನಡೆಸಲಾಗಿತ್ತು. ಇದೀಗ ಶೂಟಿಂಗ್ ನಿಲ್ಲಿಸಲಾಗಿದೆ.