ಪ್ರೇಮಕಥಾ ಹಂದರವಿರುವ ಕಾಗದ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.

 ಸಿನಿವಾರ್ತೆ

ಪ್ರೇಮ ಕಥೆ ಹೊಂದಿರುವ ‘ಕಾಗದ’ ಸಿನಿಮಾದ ಟೀಸರ್‌ ಜಂಕಾರ್ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ರಂಜಿತ್ ನಿರ್ದೇಶನದ ಈ ಸಿನಿಮಾವನ್ನು ಅರುಣ್ ಕುಮಾರ್ ಆಂಜನೇಯ ನಿರ್ಮಿಸಿದ್ದಾರೆ. ಸದ್ಯ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಹೊಸ ನಟ ಆದಿತ್ಯ ನಾಯಕ. ಅಂಕಿತ ಜಯರಾಂ ನಾಯಕಿ. ನೇಹಾ ಪಾಟೀಲ್ ವಿಶೇಷ ಪಾತ್ರದಲ್ಲಿದ್ದಾರೆ. ಬಲ ರಾಜ್ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ನಟಿಸಿದ್ದಾರೆ.