ಸಾರಾಂಶ
ಕರ್ನಾಟಕ ನಂಗಿಷ್ಟ. ಕನ್ನಡ ಭಾಷೆ ಕಲಿತಿದ್ದೀನಿ. ಆ ಭಾಷೆಯಲ್ಲಿ ಮಾತಾಡೋಕೆ ಖುಷಿ ಅಂತ ಲವ್‌ಲೀ ಸಿನಿಮಾ ನಾಯಕಿ ಸ್ಟೆಫಿ ಪಟೇಲ್ ಹೇಳಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
‘ಕರ್ನಾಟಕ ನನ್ನ ಎರಡನೇ ಮನೆ. ನನಗೆ ಕನ್ನಡ ಭಾಷೆ ಕೇಳಲಿಕ್ಕೆ ಇಷ್ಟ. ಮಾತನಾಡಲಿಕ್ಕೆ ಮತ್ತೂ ಇಷ್ಟ. ಲವ್‌ಲೀ ಸಿನಿಮಾಕ್ಕೆ ಬಂದಾಗ ನನಗೆ ಕನ್ನಡ ಗೊತ್ತಿರಲಿಲ್ಲ. ಈಗ ನಿಮ್ಮೆದುರು ಧೈರ್ಯವಾಗಿ ಮಾತಾಡೋ ಲೆವೆಲ್‌ಗೆ ಬಂದಿದ್ದೀನಿ’ ಹೀಗಂದವರು ‘ಲವ್‌ಲೀ’ ಸಿನಿಮಾದ ನಾಯಕಿ ಸ್ಟೆಫಿ ಪಟೇಲ್.ಜೂ.14ಕ್ಕೆ ವಶಿಷ್ಠ ಸಿಂಹ, ಸ್ಟೆಫಿ ನಟನೆಯ ‘ಲವ್‌ಲೀ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ‘ಈ ಸಿನಿಮಾದಲ್ಲಿ ಜನನಿ ಅನ್ನೋ ಸೊಗಸಾದ ಪಾತ್ರ ಮಾಡಿದ್ದೇನೆ’ ಎಂದರು ಸ್ಟೆಫಿ.ನಾಯಕ ವಸಿಷ್ಠ ಸಿಂಹ, ‘ನನ್ನ ಕೆರಿಯರ್‌ನಲ್ಲೇ ಮೈಲಿಗಲ್ಲಾಗುವಂಥಾ ಚಿತ್ರ ಲವ್‌ಲೀ. ಟ್ರೇಲರ್‌ನಲ್ಲಿ ಕಾಣಿಸಿಕೊಳ್ಳೋದು ಚಿತ್ರದ ಶೇ.5ರಷ್ಟು ಅಂಶ ಮಾತ್ರ. ನಿರ್ದೇಶಕ ಚೇತನ್ ಕಮರ್ಷಿಯಲ್ ಅಂಶ ಬಳಸಿಕೊಂಡೇ ಸಿನಿಮಾದ ಹೊಸ ಸಾಧ್ಯತೆ ಪರಿಷ್ಕರಿಸಿದ್ದಾರೆ’ ಎಂದರು. ಹಿರಿಯ ನಟ ದತ್ತಣ್ಣ, ‘ನಾನು ಈ 80ರ ವಯಸ್ಸಿನಲ್ಲಿ ಸುಳ್ಳು ಹೇಳಬೇಕಾಗಿಲ್ಲ. ನಿಜಕ್ಕೂ ಸಿನಿಮಾ ವಿಭಿನ್ನವಾಗಿದೆ. ಪ್ರೇಮ, ಪ್ರಣಯಕ್ಕಿಂತ ನಿಜ ಒಲವನ್ನು ಧ್ವನಿಸುವ ಒಳ್ಳೆಯ ಚಿತ್ರ’ ಎಂದರು.
ಚೇತನ್ ಕೇಶವ್ ಈ ಸಿನಿಮಾದ ನಿರ್ದೇಶಕ. ರವೀಂದ್ರ ಕುಮಾರ್ ನಿರ್ಮಾಪಕರು. ಬಾಕ್ಸ್ಎರಡಂತಸ್ತಿನ ಮರಳ ಮನೆ
ಕಲಾ ನಿರ್ದೇಶಕ ಪ್ರತಾಪ್ ಮೆಂಡನ್ ಮಲ್ಪೆ ಸಮೀಪದ ಪಡುಕರೆ ಬೀಚ್‌ನಲ್ಲಿ ಎರಡಂತಸ್ತಿನ ಮರಳ ಮನೆ ನಿರ್ಮಿಸಿದ ಸಾಹಸ ಹಂಚಿಕೊಂಡರು. ‘ಸಮುದ್ರ ದಂಡೆಯಲ್ಲಿ ಡ್ಯೂಪ್ಲೆಕ್ಸ್ ಮರಳ ಮನೆ ನಿರ್ಮಿಸಿದ್ದು ವಿಶಿಷ್ಟ ಅನುಭವ. ಮನೆಯೊಳಗೆ ಸ್ವಿಮ್ಮಿಂಗ್ ಪೂಲ್ ಸಹ ಮಾಡಿದ್ದೆವು. ಮೊದಲ ಫ್ಲೋರಿನಲ್ಲಿ 200 ಜನ ನಿಂತು ಶೂಟಿಂಗ್ ಮಾಡಿದ್ದು, ತೂಫಾನ್ ಅನ್ನೂ ಲೆಕ್ಕಿಸದೇ 90 ದಿನಗಳ ಕಾಲ ಆ ಮನೆಯಲ್ಲಿ ಚಿತ್ರೀಕರಣ ಮಾಡಿದ್ದು ಅವಿಸ್ಮರಣೀಯ ಅನುಭವ’ ಎಂದರು.