ಸಾರಾಂಶ
ಮಾಲಾಶ್ರೀ ವೈದ್ಯೆಯಾಗಿ ನಟಿಸಿರುವ ನೈಟ್ ಕರ್ಫ್ಯೂ ಸಿನಿಮಾಕ್ಕೆ ಯು ಎ ಸರ್ಟಿಫಿಕೇಟ್ ಸಿಕ್ಕಿದೆ. ಕೋವಿಡ್ ಸಂದರ್ಭದ ಸತ್ಯ ಘಟನೆ ಆಧರಿಸಿದ ಸಿನಿಮಾವಿದು.
ಕನ್ನಡಪ್ರಭ ಸಿನಿವಾರ್ತೆ ಮಾಲಾಶ್ರೀ ವೈದ್ಯೆಯಾಗಿ ನಟಿಸಿರುವ ‘ನೈಟ್ ಕರ್ಫ್ಯೂ’ ಸಿನಿಮಾಕ್ಕೆ ಯು ಎ ಸರ್ಟಿಫಿಕೇಟ್ ಸಿಕ್ಕಿದೆ. ಕೋವಿಡ್ 19 ಸಂದರ್ಭದಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ನಿರ್ದೇಶಕ ರವೀಂದ್ರ ವೆಂಶಿ ಈ ಸಿನಿಮಾಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿ.ಎಸ್ ಚಂದ್ರಶೇಖರ್ ನಿರ್ಮಾಪಕರು. ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಸಾಧುಕೋಕಿಲ, ಸಹನಶ್ರೀ, ಅಶ್ವಿನ್ ರಮೇಶ್, ವರ್ಧನ್ ತೀರ್ಥಹಳ್ಳಿ, ಮಂಜು ಪಾವಗಡ ಅಭಿನಯಿಸಿದ್ದಾರೆ.ಎಂ.ಎಸ್.ಮಾರುತಿ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣವಿದೆ, ಸಾಹಸ ಜಾಗ್ವಾರ್ ಸಣ್ಣಪ್ಪ, ಸಂಕಲನ ಸಿ.ರವಿಚಂದ್ರನ್ ಅವರದು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಸಿದ್ಧಗೊಂಡಿದ್ದು, ಏಪ್ರಿಲ್‌ನಲ್ಲಿ ತೆರೆಕಾಣಲಿದೆ.