ಗೋಲ್ಡನ್‌ಸ್ಟಾರ್‌ ಗಣೇಶ್‌ ಹಾಗೂ ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಶನ್‌ನ ಚಿತ್ರದಲ್ಲಿ ನಾಯಕಿಯಾಗಿ ತಮಿಳಿನ ಮಾಳವಿಕಾ ಶರ್ಮಾ ನಟಿಸುತ್ತಿದ್ದಾರೆ.

ಸಿನಿವಾರ್ತೆ

ಗೋಲ್ಡನ್‌ಸ್ಟಾರ್‌ ಗಣೇಶ್‌ ಹಾಗೂ ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಶನ್‌ನ ಚಿತ್ರದಲ್ಲಿ ನಾಯಕಿಯಾಗಿ ತಮಿಳಿನ ಮಾಳವಿಕಾ ಶರ್ಮಾ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಈಗಾಗಲೇ ದೇವಿಕಾ ಭಟ್‌ ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ನಟಿಯ ಹೆಸರು ಘೋಷಣೆಯಾಗಿದೆ.

ಮಾಳವಿಕಾ ಶರ್ಮಾ ತಮಿಳಿನಲ್ಲಿ ‘ಟಿಕೆಟ್‌’, ‘ರೆಡ್‌’, ‘ಕಾಫಿ ವಿತ್‌ ಕಾದಲ್‌’, ‘ಭೀಮಾ’ ಹಾಗೂ ‘ಹರೋಮ್‌ ಹರಾ’ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಾಳವಿಕಾ ಶರ್ಮಾ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.