ಕನ್ನಡದಲ್ಲಿ ಮತ್ತೊಂದು ಮಲ್ಟಿಲಾಂಗ್ವೇಜ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಕನ್ನಡದಲ್ಲಿ ‘ಮಂಡ್ಯ’ ಎಂಬ ಬಹುಭಾಷೆಯ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಕನ್ನಡದಲ್ಲಿ ‘ಮಂಡ್ಯ’, ತೆಲುಗಿನಲ್ಲಿ ‘ಗಾಯಂ’, ಮರಾಠಿಯಲ್ಲಿ ‘ಮವಾಲಿ’ ಹಾಗೂ ಹಿಂದಿಯಲ್ಲಿ ‘ಬಾಂಬೆ’ ಎನ್ನುವ ಹೆಸರಿಡಲಾಗಿದೆ. ಈ ಚಿತ್ರಕ್ಕೆ ಸಂಜಯ್‌ ನಿರಂಜನ್‌ ನಿರ್ದೇಶಕರು. ಗವಿ ಚಾಹಲ್, ದೀಪ್ಶಿಖಾ ನಾಗ್ಪಾಲ್‌, ಡ್ಯಾನಿಶ್ ಭಟ್, ಗಣೇಶ್ ಪೈ, ವಂದನಾ ಲಾಲ್ವಾನಿ, ಅಕ್ಷಿತಾ ಅಗ್ನಿಹೋತ್ರಿ, ಪರಿ ಮಿರ್ಜಾ, ಆಶಿಶ್ ವಾರಂಗ್, ಜಸ್ಸಿ ಸಿಂಗ್, ದೀಪಕ್ ಭಾಟಿಯಾ ಹಾಗೂ ಪ್ರಕಾಶ್ ಧೋತ್ರೆ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಸಂಜಯ್‌ ನಿರಂಜನ್‌, ‘ನಾನು ಕನ್ನಡದವನೇ. ಬೇರೆಯ ಬೇರೆ ಭಾಷೆಯ ಕಲಾವಿದರನ್ನು ಸೇರಿಸಿಕೊಂಡು ಈ ಸಿನಿಮಾ ನಿರ್ದೇಶಿಸಿದ್ದೇನೆ. ಮಂಡ್ಯ ನಗರದಲ್ಲಿ ನಡೆಯುವ ನಾಲ್ಕು ಮಂದಿ ಹುಡುಗರ ದರೋಡೆ ಕತೆ ಇದಾಗಿದೆ. ನಾಲ್ಕು ಮಂದಿ ಪೈಕಿ ಒಬ್ಬ ಕಾಣೆಯಾದಾಗ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದರು. ಈ ತಿಂಗಳ ಕೊಲೆ ಅಥವಾ ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ.