ಏ.26ಕ್ಕೆ ಮಾರಕಾಸ್ತ್ರ ಸಿನಿಮಾ ಮರು ಬಿಡುಗಡೆ

| Published : Apr 24 2024, 02:20 AM IST

ಏ.26ಕ್ಕೆ ಮಾರಕಾಸ್ತ್ರ ಸಿನಿಮಾ ಮರು ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಲಾಶ್ರೀ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾರಕಾಸ್ತ್ರ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

ಕನ್ನಡಪ್ರಭ ಸಿನಿವಾರ್ತೆ

ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾರಕಾಸ್ತ್ರ’ ಸಿನಿಮಾ ಏ.26ರಂದು ಮರು ಬಿಡುಗಡೆ ಆಗುತ್ತಿದೆ. ತೆಲುಗಿಗೂ ಡಬ್‌ ಆಗಿ ಬಿಡುಗಡೆಯಾಗುತ್ತಿದ್ದು, ‘ಮಾರಣಾಯುಧಂ’ ಎಂದು ಹೆಸರಿಡಲಾಗಿದೆ. ಕೋಮಲ್‌ ನಟರಾಜ್ ನಿರ್ಮಾಣ, ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ, ಆನಂದ್ ಆರ್ಯ, ಚೇತನ್‌, ಮಂಜುಳಾ ರೆಡ್ಡಿ ನಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಲಾಶ್ರೀ, ‘ಈ ಹಿಂದೆ ಚಿತ್ರವನ್ನು ಬಿಡುಗಡೆ ಮಾಡುವಾಗಲೇ ಇದು ಒಳ್ಳೆಯ ಸಮಯ ಅಲ್ಲ ಎಂದು ನಾನು ಹೇಳಿದ್ದೆ. ಆದರೂ ಆಗ ನನ್ನ ಮಾತು ಕೇಳದೆ ಸಿನಿಮಾ ಬಿಡುಗಡೆ ಮಾಡಿದರು. ಸಿನಿಮಾ ಜನಕ್ಕೆ ತಲುಪಲಿಲ್ಲ. ಈಗ ಚಿತ್ರವನ್ನು ಎಡಿಟ್‌ ಮಾಡಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಒಳ್ಳೆಯ ಚಿತ್ರವನ್ನು ಎಲ್ಲರೂ ನೋಡಿ’ ಎಂದರು.

ನಿರ್ದೇಶಕ ಗುರುಮೂರ್ತಿ ಸುನಾಮಿ, ಕೋಮಲ್‌ ನಟರಾಜ್‌, ಆನಂದ್‌ ಆರ್ಯ, ಚೇತನ್‌, ಮಂಜುಳಾ ರೆಡ್ಡಿ ಇದ್ದರು.