ನಾಗರಾಜ್‌ ಸೋಮಯಾಜಿ ನಿರ್ದೇಶನದ ಹೊಸ ಚಿತ್ರ ಮರ್ಯಾದೆ ಪ್ರಶ್ನೆ

| Published : Mar 15 2024, 01:20 AM IST

ಸಾರಾಂಶ

ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮರ್ಯಾದೆ ಪ್ರಶ್ನೆ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆ ಅನಾವರಣಗೊಂಡಿದೆ.

‘ಪುಕ್ಸಟ್ಟೆ ಲೈಫು’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ನಾಗರಾಜ್‌ ಸೋಮಯಾಜಿ ಇದೀಗ ‘ಮರ್ಯಾದೆ ಪ್ರಶ್ನೆ’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದೆ. ಸದ್ಯ ಈ ಚಿತ್ರದ ರೀರೆಕಾರ್ಡಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ವಿವಿಧ ಲೇಯರ್‌ಗಳಿರುವ ಕಥೆಯಲ್ಲಿ ಐದಾರು ಜನ ಕಲಾವಿದರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಕುರಿತು ನಾಗರಾಜ್‌ ಸೋಮಯಾಜಿ, ‘ಬೆಂಗಳೂರಿನ ಮಧ್ಯಮ ವರ್ಗದ ಬದುಕು, ಅವರ ಖುಷಿ ಬೇಜಾರು, ಬದುಕಿನ ಕುಂದುಕೊರತೆಗಳಿಗೆ ಅವರ ಪ್ರತಿಕ್ರಿಯೆ ಇತ್ಯಾದಿಗಳನ್ನು ನೈಜವಾಗಿ ದಾಖಲಿಸುವ ಪ್ರಯತ್ನ ಸಿನಿಮಾದಲ್ಲಾಗಿದೆ. ಇದೊಂದು ಡ್ರಾಮಾ, ಥ್ರಿಲ್ಲರ್‌, ಬೇಸಿಕ್‌ ರಿವೆಂಜ್‌ ಜಾನರಾ. ಈ ಕತೆಯ ಒನ್‌ಲೈನ್‌ ಹೇಳಿದ್ದು ಆರ್‌ಜೆ ಪ್ರದೀಪ್‌. ಚಿತ್ರಕಥೆ, ಸಂಭಾಷಣೆ, ನಿರ್ದೇಶನ ನನ್ನದು’ ಎಂದರು.ಈ ಹಿಂದೆ ನಾಗರಾಜ್‌, ‘ದಿ ಬೆಸ್ಟ್ ಆ್ಯಕ್ಟರ್‌’ ಎಂಬ ಸಿನಿಮಾ ನಿರ್ದೇಶಿಸಿದ್ದರು.