ಸಾರಾಂಶ
ಮ್ಯಾಕ್ಸ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಖುಷಿ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ಕೊನೆಗೂ ಮುಕ್ತಾಯಗೊಂಡಿದೆ. ಈ ಸಿನಿಮಾದ ಅಪ್‌ಡೇಟ್ಸ್ ಕೇಳುತ್ತಿದ್ದ ಅಭಿಮಾನಿಗಳಿಗೆ ‘ಶೀಘ್ರ ನಿಮ್ಮ ಮುಂದೆ ಬರ್ತೀವಿ’ ಎಂಬ ಶುಭ ಸುದ್ದಿಯನ್ನು ಸುದೀಪ್ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ, ‘ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. 10 ತಿಂಗಳ ಸುದೀರ್ಘ ಪಯಣ ಇದಾಗಿತ್ತು. ಈ ಪಯಣದಲ್ಲಿ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ. ಅದ್ಭುತ ತಂಡ ಹಾಗೂ ಕಲಾವಿದರೊಂದಿಗೆ ಕೆಲಸ ಮಾಡಿದ್ದು ಅವಿಸ್ಮರಣೀಯ ಅನುಭವ’ ಎಂದಿದ್ದಾರೆ.
ಈ ಪೋಸ್ಟ್ ಜೊತೆಗೆ ಈ ಶೂಟಿಂಗ್ ಸ್ಥಳದ ಆಸುಪಾಸಿನ ಜಾಗಗಳು, ಶೂಟಿಂಗ್ ಸೆಟ್, ತಮ್ಮ ಮೇಕಪ್ ರೂಂ ಇವನ್ನೆಲ್ಲ ತೋರಿಸುವ ವೀಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ. ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಮೂರು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ತೆರೆಗೆ ಬರುವ ಸಾಧ್ಯತೆ ಇದೆ.