ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ಗೆ ಹೆಣ್ಣು ಮಗು

| Published : Sep 06 2024, 01:08 AM IST / Updated: Sep 06 2024, 04:35 AM IST

Darling Krishna milana nagraj

ಸಾರಾಂಶ

ಸ್ಯಾಂಡಲ್‌ವುಡ್‌ ನಟ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ನಟಿ ಪ್ರಣೀತಾ ಸುಭಾಷ್‌ ಕೂಡ ಎರಡನೇ ಬಾರಿಗೆ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  ಸಿನಿವಾರ್ತೆ

ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ಗೆ ಹೆಣ್ಣು ಮಗುವಾಗಿದೆ. ಈ ಸಂಭ್ರಮವನ್ನು ‘ಲವ್‌ಮಾಕ್‌ಟೇಲ್‌’ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ‘ಮಗಳು ಹುಟ್ಟಿದ್ದಾಳೆ. 

ತಾಯಿ, ಮಗು ಆರೋಗ್ಯವಾಗಿದ್ದಾರೆ. ಈ ಜರ್ನಿಯಲ್ಲಿ ಪತ್ನಿ ಮಿಲನಾ ನಾಗರಾಜ್‌ ಅನುಭವಿಸಿದ ನೋವು, ಮಾಡಿದ ತ್ಯಾಗ, ತೋರಿದ ಧೈರ್ಯದ ಬಗ್ಗೆ ಹೆಮ್ಮೆ ಇದೆ. ಈ ಮೂಲಕ ಎಲ್ಲ ತಾಯಂದಿರಿಗೆ ನನ್ನ ಸೆಲ್ಯೂಟ್. ಇದೆಲ್ಲ ನೋಡಿದ ಮೇಲೆ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ಡಬಲ್ ಆಗಿದೆ. 

ನಾನು ಅದೃಷ್ಟವಂತ ತಂದೆ. ಮಗಳ ಅಪ್ಪ ಆಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಡಾರ್ಲಿಂಗ್‌ ಕೃಷ್ಣ ಹೇಳಿದ್ದಾರೆ. ಇನ್ನೊಂದೆಡೆ ನಟಿ ಪ್ರಣೀತಾ ಸುಭಾಷ್‌ ಎರಡನೇ ಬಾರಿ ತಾಯಿಯಾಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಮಗು ಹಾಗೂ ಪತಿ ಜೊತೆಗೆ ಇರುವ ಫೋಟೋವನ್ನು ಪ್ರಣೀತಾ ಪೋಸ್ಟ್ ಮಾಡಿದ್ದಾರೆ.