ಮಿಸ್‌ಗೈಡ್‌ ಚಿತ್ರದ ಟೀಸರ್‌ ಬಿಡುಗಡೆ

| Published : Mar 21 2024, 01:02 AM IST

ಮಿಸ್‌ಗೈಡ್‌ ಚಿತ್ರದ ಟೀಸರ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಬರ ಮಿಸ್ ಗೈಡ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಮಂಜು ಕವಿ ನಿರ್ದೇಶನದ ಚಿತ್ರವಿದು.

ಕನ್ನಡಪ್ರಭ ಸಿನಿವಾರ್ತೆ

ಮಂಜುಕವಿ ನಿರ್ದೇಶನದ ‘ಮಿಸ್‌ಗೈಡ್‌’ ಚಿತ್ರದ ಟೀಸರ್‌ ಅನ್ನು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ನಾಗರಾಜ್‌ ಹಾಗೂ ಸುಬ್ಬು ನಿರ್ಮಾಣದ ಈ ಚಿತ್ರದಲ್ಲಿ ನಿತೀಶ್‌, ವಿನಯ್‌ ರಾಜ್‌, ರಕ್ಷ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಶೂಟಿಂಗ್‌ ಮುಕ್ತಾಯಗೊಂಡಿದ್ದು, ತೆರೆಗೆ ಬರಲು ಸಿದ್ದತೆ ನಡೆಸಿದೆ.

ನಿರ್ದೇಶಕ ಮಂಜುಕವಿ ಮಾತನಾಡಿ, ‘ಹೊಸ ನಿರೂಪಣೆಯಿಂದ ಕೂಡಿರುವ ಸಿನಿಮಾ. ಒಬ್ಬರಿಗೆ ಮಿಸ್‌ ಗೈಡ್‌ ಮಾಡಿದ ಮೇಲೆ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಕತೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ತಂಡದ ಶ್ರಮದಿಂದ ಈ ಸಿನಿಮಾ ಮೂಡಿ ಬರಲು ಸಾಧ್ಯವಾಗಿದೆ’ ಎಂದರು. ನಿರ್ಮಾಣದ ಜತೆಗೆ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಸುಬ್ಬು ಅವರು.