ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ಎಂಎಂಬಿ ಲೆಗಸಿ

| Published : Oct 31 2024, 12:50 AM IST

ಸಾರಾಂಶ

ಸಿನಿಮಾ ಕಾರ್ಯಕ್ರಮಗಳಿಗೆ ಸೀಮಿತವಾಗಿರುವ ಎಂಎಂಬಿ ಲೆಗಸಿಗೆ ಎರಡನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ಸಿನಿವಾರ್ತೆ

ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಜಿಟಿ ಮಾಲ್‌ನಲ್ಲಿರುವ ನವರಸನ್‌ ಸಾರಥ್ಯದ ಎಂಎಂಬಿ ಲೆಗಸಿಯ ಎರಡನೇ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ನವರಸನ್‌, ‘ಕಳೆದ ಕೆಲವು ವರ್ಷಗಳ ಹಿಂದೆ ಚಿತ್ರರಂಗದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಚಲನಚಿತ್ರಗಳಿಗೆ ಸಂಬಂಧಿಸಿದ ಸಮಾರಂಭಗಳನ್ನು ನಡೆಸಲು ಸೀಮಿತ ಬಜೆಟ್‌ನ ಸುಸಜ್ಜಿತ ಸಭಾಂಗಣದ ಅವಶ್ಯಕತೆ ಬಗ್ಗೆ ಗೊತ್ತಾಯಿತು. ನಿರ್ಮಾಪಕರಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗದ ದರದಲ್ಲಿ ತಮ್ಮ ಸಿನಿಮಾ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದು. ಈ ಎರಡು ವರ್ಷಗಳಲ್ಲಿ 300ಕ್ಕೂ ಹೆಚ್ಚು ಸಮಾರಂಭಗಳು ಇಲ್ಲಿ ನಡೆದಿದೆ’ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್‌, ನಟರಾದ ಚಂದನ್‌ ಶೆಟ್ಟಿ, ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್‌, ಗೋವಿಂದರಾಜು, ಚೇತನ್‌ ಗೌಡ, ರಾಜೇಶ್‌, ಜಿ.ಟಿ.ಮಾಲ್‌ನ ಮಾಲೀಕ ಆನಂದ್‌, ಜಾಲಿವುಡ್‌ ಸ್ಟುಡಿಯೋಸ್‌ನ ಬಶೀರ್‌, ಸಿನಿಮಾ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್‌, ನಾಗೇಂದ್ರ, ವಿಜಯ್‌ ಕುಮಾರ್‌, ಕಲ್ಲೇಶ್‌ ಭಾಗವಹಿಸಿದ್ದರು.