ಸಾರಾಂಶ
2024ರ ಬಹು ನಿರೀಕ್ಷಿತ ಪ್ರೇಮ ಕಥಾ ಸಿನಿಮಾಗಳ ಪಟ್ಟಿ
ಕನ್ನಡಪ್ರಭ ಸಿನಿವಾರ್ತೆ1. ಯುವ
ಯುವ ರಾಜ್‌ಕುಮಾರ್ ನಟನೆಯ ಮೊದಲ ಸಿನಿಮಾ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಸಿನಿಮಾದಲ್ಲಿ ಸಪ್ತಮಿ ಗೌಡ ಕಾಲೇಜು ಹುಡುಗಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದೊಂದು ಪ್ರೇಮ ಕತೆ ಮತ್ತು ಕುಟುಂಬದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಯುವ ರಾಜ್‌ಕುಮಾರ್ ಮತ್ತು ಸಪ್ತಮಿ ಗೌಡ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು,2. ಇಬ್ಬನಿ ತಬ್ಬಿದ ಇಳೆಯಲಿಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಸಿನಿಮಾ ಇದು. ಅನಾಹಿತಾ ಎಂಬ ನೆನಪುಗಳನ್ನು ಜೋಪಾನವಾಗಿಡುವ ಹುಡುಗಿ, ಸಿದ್ದಾರ್ಥ ಎಂಬ ಮಹತ್ವಾಕಾಂಕ್ಷೆಯ ಹುಡುಗನ ಮಧ್ಯದ ಪ್ರೇಮ ಕತೆ ಇದು. ಆ ಎರಡು ಪಾತ್ರಗಳಲ್ಲಿ ಅಂಕಿತಾ ಅಮರ್, ವಿಹಾನ್ ನಟಿಸಿದ್ದಾರೆ. ಜೊತೆಗೆ ರಾಧೆ ಪಾತ್ರದಲ್ಲಿ ಮಯೂರಿ ಇದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ‘ಅವರವರ ಬದುಕಿನ ಪ್ರೇಮವನ್ನು ನೆನಪಿಸುವಂತಹ ಕತೆ ಇರುವ ಸಿನಿಮಾ ಇದು’ ಎನ್ನುತ್ತಾರೆ ನಿರ್ದೇಶಕ ಚಂದ್ರಜಿತ್.3. ನಾಗತಿಹಳ್ಳಿ ಹೊಸ ಚಿತ್ರ- ಅಮರ ಮಧುರ ಪ್ರೇಮ
ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಧಾರಿಗಳಾಗಿ ನಟಿಸುತ್ತಿರುವ ಸಿನಿಮಾ ಇದು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಕಾಡುವ, ಯೋಚನೆಗೆ ಹಚ್ಚುವ ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾ ಇದು ಎನ್ನಲಾಗಿದೆ. ಈ ಚಿತ್ರದ ಕೆಲವು ಭಾಗ ಅಮೆರಿಕಾದಲ್ಲಿ ಚಿತ್ರೀಕರಣಗೊಂಡಿದೆ.