ಮುಕ್ತ ಮನಸು ಚಿತ್ರದ ಟ್ರೇಲರ್‌ ರಿಲೀಸ್

| Published : Mar 30 2024, 12:50 AM IST

ಸಾರಾಂಶ

ಮುಕ್ತ ಮನಸು ಸಿನಿಮಾದ ಟ್ರೇಲರ್ ಅನಾವರಣ

ಕನ್ನಡಪ್ರಭ ಸಿನಿವಾರ್ತೆ

ಹೊಸಬರ ‘ಮುಕ್ತ ಮನಸು’ ಸಿನಿಮಾದ ಹಾಡು ಹಾಗೂ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆರ್ ಸಿ ರಂಗಶೇಖರ್ ಈ ಸಿನಿಮಾದ ನಿರ್ದೇಶಕರು. ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಬೋರೇಗೌಡ, ಲೋಕೇಶ್, ಜಿ.ಎನ್.ವೀಣಾ ಸಹ ನಿರ್ಮಾಪಕರು.

ನಿರ್ದೇಶಕ ಆರ್ ಸಿ ರಂಗಶೇಖರ್, ‘ನಾನು ರಂಗಭೂಮಿ ಕಲಾವಿದ. ಸತತ 25 ವರ್ಷಗಳ ಕಾಲ ರಂಗಾಯಣದಲ್ಲಿ ಕೆಲಸ ಮಾಡಿದ್ದೇನೆ. ಕಲ್ಮಷ ಇಲ್ಲದ ಪ್ರೀತಿ ಹೇಗೆ ಕೊನೆಯ ತನಕ ಉಳಿಯುತ್ತದೆ ಎಂಬ ಕಥಾ ಹಂದರ ಚಿತ್ರದಲ್ಲಿದೆ’ ಎಂದರು.

ಮೈಸೂರಿನ ಮೋಹನ್‌ ರಂಗನಾಥ್ ಚಿತ್ರದ ನಾಯಕ. ಶಾಸ್ತ್ರೀಯ ನೃತ್ಯ ಕಲಾವಿದೆ ಮಾನ್ಯ ನಾಯಕಿ. ಶೋಭರಾಜ್, ರಮೇಶ್‌ ಪಂಡಿತ್, ಅಪರ್ಣಾ, ನಾಗರತ್ನ, ಸೆಂಚೂರಿ ಗೌಡ, ಜಾನು, ಮಂಜು ಬಿಳಿಗೆರೆ, ಮಧು ನಟಿಸಿದ್ದಾರೆ. ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿ, ಸಾಹಸ ಕೌರವ ವೆಂಕಟೇಶ್, ನೃತ್ಯ ಪ್ರಮೋದ್-ಸತ್ಯ ಅವರದು.