‘ನನ್ನ ಹಾಗೂ ಐಶ್ವರ್ಯಾ ರೈ ನಡುವಿನ ಡಿವೋರ್ಸ್‌ ವದಂತಿ ನನ್ನ ಮಗಳ ಕಿವಿಗೂ ಬಿದ್ದಿರುತ್ತದೆ. ಆದರೆ ಅವಳಿಗೆ ಎಲ್ಲಾ ಸುದ್ದಿಗಳನ್ನೂ ನಂಬಬಾರದು ಎಂದು ಪತ್ನಿ ಐಶ್ವರ್ಯಾ ಕಲಿಸಿಕೊಟ್ಟಿದ್ದಾರೆ. ಹೀಗಾಗಿ ಅದು ಅವಳ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇಲ್ಲ’ ಎಂದು ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ.

 ಸಿನಿವಾರ್ತೆ

ಮಗಳು ಆರಾಧ್ಯಾಗೀಗ 14 ವರ್ಷ ವಯಸ್ಸು

ಸಂದರ್ಶನವೊಂದರಲ್ಲಿ ಅಭಿಷೇಕ್‌, ‘ಮಗಳು ಆರಾಧ್ಯಾಗೀಗ 14 ವರ್ಷ ವಯಸ್ಸು. ನಾವಿನ್ನೂ ಅವಳಿಗೆ ಮೊಬೈಲ್‌ ಕೊಡಿಸಿಲ್ಲ. ಅವಳ ಫ್ರೆಂಡ್ಸ್‌ ಮಾತನಾಡಬೇಕಿದ್ದರೆ ಐಶ್ವರ್ಯಾಗೆ ಕಾಲ್‌ ಮಾಡುತ್ತಾರೆ. ಇದು ನಾವು ಪ್ರಜ್ಞಾಪೂರ್ವಕವಾಗಿ ಕೈಗೊಂಡ ನಿರ್ಧಾರ’ ಎಂದಿದ್ದಾರೆ.

ಏಳೆಂಟು ವರ್ಷದ ಮಕ್ಕಳ ಕೈಯಲ್ಲೂ ಫೋನ್‌ ಇರುವ ಈ ಕಾಲ

ಏಳೆಂಟು ವರ್ಷದ ಮಕ್ಕಳ ಕೈಯಲ್ಲೂ ಫೋನ್‌ ಇರುವ ಈ ಕಾಲದಲ್ಲಿ ಐಶ್ವರ್ಯಾ ತನ್ನ ಮಗಳನ್ನು ಫೋನ್‌ ಫ್ರೀಯಾಗಿ ಬೆಳೆಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.