ಸಾರಾಂಶ
ಡಾ. ಎಚ್‌ಎಂ ಕೃಷ್ಣಮೂರ್ತಿ ನಟಿಸಿ, ನಿರ್ಮಿಸಿರುವ ‘ನಾಡಸಿಂಹ ಕೆಂಪೇಗೌಡ’ ವಿಡಿಯೋ ಆಲ್ಬಂ ಬಿಡುಗಡೆ ಆಗಿದೆ. ಎಕೆಜಿ ಯೂಟ್ಯೂಬ್ ಚಾನಲ್‌ನಲ್ಲಿ ಹಾಡನ್ನು ನೋಡಬಹುದು.
ಸಿನಿವಾರ್ತೆ
ಡಾ. ಎಚ್‌ಎಂ ಕೃಷ್ಣಮೂರ್ತಿ ನಟಿಸಿ, ನಿರ್ಮಿಸಿರುವ ‘ನಾಡಸಿಂಹ ಕೆಂಪೇಗೌಡ’ ವಿಡಿಯೋ ಆಲ್ಬಂ ಬಿಡುಗಡೆ ಆಗಿದೆ. ಎಕೆಜಿ ಯೂಟ್ಯೂಬ್ ಚಾನಲ್‌ನಲ್ಲಿ ಹಾಡನ್ನು ನೋಡಬಹುದು. ಎಚ್‌ಎಂ ಕೃಷ್ಣಮೂರ್ತಿ, ‘ಮಾಗಡಿ ಕೆಂಪೇಗೌಡರ ಸ್ಮರಣೆಗಾಗಿ ಈ ಹಾಡನ್ನು ನಿರ್ಮಿಸಿದ್ದೇನೆ. ಮೊದಲ ಬಾರಿಗೆ ಕೆಂಪೇಗೌಡರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಕೆಂಪೇಗೌಡರ ಕುರಿತ ವಿವರಣೆ ಇರುವ ಹಾಡು’ ಎಂದರು.
ಕೆ ರಾಮನಾರಾಯಣ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ, ಶಂಕರ್ ಮಹಾದೇವನ್ ಹಾಗೂ ಅನುರಾಧ ಭಟ್ ಗಾಯನ ಇದೆ. ಟಿ ಎಸ್ ನಾಗಾಭರಣ, ವಿನಯಪ್ರಸಾದ್, ಧರ್ಮ, ನೀನಾಸಂ ಅಶ್ವಥ್, ಮುನಿ, ಎಚ್ ವಾಸು, ವಿಕ್ಟರಿ ವಾಸು ಅಭಿನಯಿಸಿದ್ದಾರೆ.