ಸಾರಾಂಶ
ನೀನಾಸಂ ಸತೀಶ್ ನಟನೆಯ ಮ್ಯಾಟ್ನೀ ಸಿನಿಮಾ ಏ.5ಕ್ಕೆ ರಿಲೀಸ್
ಕನ್ನಡಪ್ರಭ ಸಿನಿವಾರ್ತೆ
ನೀನಾಸಂ ಸತೀಶ್ ನಟನೆಯ ‘ಮ್ಯಾಟ್ನಿ’ ಚಿತ್ರ ಏ.5ಕ್ಕೆ ಬಿಡುಗಡೆಯಾಗಲಿದೆ. ರಚಿತಾ ರಾಮ್ ಚಿತ್ರದ ನಾಯಕಿ. ಅದಿತಿ ಪ್ರಭುದೇವ, ನಾಗಭೂಷಣ್, ಶಿವರಾಜ್ ಕೆ.ಆರ್ ಪೇಟೆ, ಪೂರ್ಣಚಂದ್ರ ಮೈಸೂರು ಮುಂತಾದವರು ನಟಿಸಿದ್ದಾರೆ.
ಇದೊಂದು ಹಾರರ್ ಕಾಮಿಡಿ ಜಾನರ್ ಚಿತ್ರವಾಗಿದ್ದು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದಾರೆ. ಪಾರ್ವತಿ ಎಸ್ ಗೌಡ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಮ್ಯಾಟ್ನಿ’ ಚಿತ್ರಕ್ಕಿದೆ.