ಸಾರಾಂಶ
ಅಚ್ಯುತ ಕುಮಾರ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ನಟನೆಯ ಹೊಸ ಸಿನಿಮಾ ಅಣ್ತಮ್ತನ
ಕನ್ನಡಪ್ರಭ ಸಿನಿವಾರ್ತೆ
ವಿಶ್ವ ನಿರ್ದೇಶನದ ಚೊಚ್ಚಲ ಸಿನಿಮಾ ‘ಅಣ್ತಮ್ತನ’ ಘೋಷಣೆ ಆಗಿದೆ. ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅಣ್ಣ ತಮ್ಮಂದಿರಾಗಿ ಪ್ರಧಾನ ಪಾತ್ರಗಳಲ್ಲಿದ್ದಾರೆ.ಗಿರೀಶ್ ಜಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಳೇ ಮೈಸೂರು ಸೀಮೆಯ ಸಂಸ್ಕೃತಿ, ನಂಬಿಕೆ, ಬದುಕಿನ ಹಿನ್ನೆಲೆಯಲ್ಲಿ ಮೂಡಿಬರಲಿರುವ ಚಿತ್ರ ಸಹೋದರರ ಬಾಂಧವ್ಯದ ಕಥೆ ಹೊಂದಿದೆ. ‘ಸಾವ್ರ ಮಾತ್ ಬರುತ್ತೆ ಹೋಗುತ್ತೆ, ಅಣ್ತಮ್ತನ ಮುಖ್ಯ’ ಎಂಬ ಟ್ಯಾಗ್‌ಲೈನ್ ಸಿನಿಮಾಕ್ಕಿದೆ.