ಸಾರಾಂಶ
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಮಲ್ಟಿಪ್ಲೆಕ್ಸ್ ಆರಂಭವಾಗಿದೆ. ನಾಲ್ಕು ಸ್ಕ್ರೀನ್ ಗಳನ್ನು ಒಳಗೊಂಡು ವಿ ಸಿನಿಮಾಸ್ ಎಲ್ಲಿದೆ?
ಸಿನಿವಾರ್ತೆ
ಬೆಂಗಳೂರಿನ ರಾಮಮೂರ್ತಿ ನಗರದ ಟಿ ಸಿ ಪಾಳ್ಯದ ಮುಖ್ಯರಸ್ತೆಯಲ್ಲಿರುವ ನಾಲ್ಕು ಮಹಡಿಯ ವಿ ಕ್ಲಾಸ್ ಹೆಸರಿನ ಕಟ್ಟಡದಲ್ಲಿ ‘ವಿ ಸಿನಿಮಾಸ್’ ಎಂಬ ಹೊಸ ಮಲ್ಟಿಪ್ಲೆಕ್ಸ್ ಆರಂಭವಾಗಿದೆ.
ವಿ ಗ್ರೂಪ್ಸ್ ಮಾಲಿಕತ್ವದ ನಾಲ್ಕು ಸ್ಕ್ರೀನ್‌ಗಳ ಈ ಮಲ್ಟಿಪ್ಲೆಕ್ಸ್ ಅನ್ನು ರಮೇಶ್ ಅರವಿಂದ್ ಹಾಗೂ ಡಾಲಿ ಧನಂಜಯ್ ಉದ್ಘಾಟಿಸಿದರು. ವಿತರಕ ಮಾರ್ಸ್ ಸುರೇಶ್ ಸೇರಿದಂತೆ ಹಲವರು ಹಾಜರಿದ್ದರು.