ಸಾರಾಂಶ
ಕ್ಲಾಸ್‌ಮೇಟ್ ಜೊತೆಗೆ ಲೈಫ್ ಶೇರ್ ಮಾಡಲು ಮುಂದಾಗಿದ್ದಾರೆ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್.
ನಟಿ, ಕತೆಗಾರ್ತಿ ರಂಜನಿ ರಾಘವನ್ ತಾನು ಬಾಳ ಸಂಗಾತಿ ಆಗಲಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತನ್ನ ಕ್ಲಾಸ್‌ಮೇಟ್ ಸಾಗರ್ ಭಾರದ್ವಾಜ್ ಜೊತೆ ರಂಜನಿ ಪ್ರೇಮದಲ್ಲಿ ಬಿದ್ದಿದ್ದಾರೆ.
ಈ ಬಗ್ಗೆ ಕನ್ನಡಪ್ರಭ ಜೊತೆಗೆ ಮಾಹಿತಿ ಹಂಚಿಕೊಂಡಿರುವ ರಂಜನಿ, ‘ನಾವಿಬ್ಬರೂ ಪಿಯುಸಿಯಿಂದ ಜೊತೆಗೆ ಓದಿದವರು. ಒಳ್ಳೆ ಸ್ನೇಹಿತರಾಗಿದ್ದವರು. ಇದೀಗ ಬದುಕಿನ ಪಯಣವನ್ನು ಜೊತೆಯಾಗಿ ಮುಂದುವರಿಸಲು ಹೊರಟಿದ್ದೇವೆ.
ಸಾಗರ್ ಅಂತಾರಾಷ್ಟ್ರೀಯ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ. ನನಗೆ ನಟನೆಯ ಜೊತೆಗೆ ಸಾಹಿತ್ಯ ಆಸಕ್ತಿ ಇರುವಂತೆ ಬೈಕಿಂಗ್, ಅಥ್ಲೆಟಿಕ್ಸ್ ಅವರ ಆಸಕ್ತಿಯ ಕ್ಷೇತ್ರ. ಅವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಬೈಕಿಂಗ್ ಮಾಡಿದ್ದಾರೆ. ನಾವಿಬ್ಬರೂ ನಮ್ಮ ನಮ್ಮ ವೃತ್ತಿಯಲ್ಲಿ ಬ್ಯುಸಿ ಆಗಿರುವ ಕಾರಣ ಮದುವೆ ಯೋಚನೆ ಸದ್ಯಕ್ಕಿಲ್ಲ’ ಎಂದಿದ್ದಾರೆ.