ಅ.31ಕ್ಕೆ ಕೋಮಲ್‌ ನಟನೆಯ ಕೋಣ ತೆರೆಗೆ

| N/A | Published : Oct 21 2025, 01:00 AM IST

ಸಾರಾಂಶ

ಇದೇ ಅಕ್ಟೋಬರ್‌ 31ಕ್ಕೆ ಕೋಮಲ್‌ ನಟನೆಯ ‘ಕೋಣ’ ಸಿನಿಮಾ ತೆರೆಗೆ ಬರಲಿದೆ. ಕಾರ್ತಿಕ್‌ ಕಿರಣ್‌ ಸಂಕಪಾಲ್‌, ರವಿಕಿರಣ್‌ .ಎನ್‌ ನಿರ್ಮಾಣದ ಈ ಚಿತ್ರವನ್ನು ಹರಿಕೃಷ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

 ಸಿನಿವಾರ್ತೆ

ಇದೇ ಅಕ್ಟೋಬರ್‌ 31ಕ್ಕೆ ಕೋಮಲ್‌ ನಟನೆಯ ‘ಕೋಣ’ ಸಿನಿಮಾ ತೆರೆಗೆ ಬರಲಿದೆ. ಕಾರ್ತಿಕ್‌ ಕಿರಣ್‌ ಸಂಕಪಾಲ್‌, ರವಿಕಿರಣ್‌ .ಎನ್‌ ನಿರ್ಮಾಣದ ಈ ಚಿತ್ರವನ್ನು ಹರಿಕೃಷ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ನನಗೆ ಕೋಣ ಬಾಲ್ಯದಿಂದಲೂ ಕನೆಕ್ಟ್‌ ಆಗಿರುವ ಹೆಸರು. ನನ್ನ ಟೀಚರ್‌ ನನ್ನ ಕೋಣ... ಕೋಣ ಅಂತಲೇ ಕರೆಯುತ್ತಿದ್ದರು. ನನಗೆ ಆ ಕೋಪ ಬರುತ್ತಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡಿರುವುದು ನೆನಪಿಸಿಕೊಂಡರೆ ಖುಷಿ ಆಗುತ್ತದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎಂದು ನಟ ಕೋಮಲ್‌ ಹೇಳಿಕೊಂಡರು.

ಹರಿಕೃಷ್ಣ, ‘ಒಂದು ನೈಜ ಘಟನೆಯನ್ನು ಆಧರಿಸಿದ ಡಾರ್ಕ್‌ ಕಾಮಿಡಿ ಶೈಲಿಯ ಸಿನಿಮಾ’ ಎಂದರು. ಕೀರ್ತಿರಾಜ್‌, ರಿತ್ವಿ ಜಗದೀಶ್‌, ರಾಘು ರಾಮನಕೊಪ್ಪ, ವಿಜಯ್‌ ಚೆಂಡೂರ್‌, ಎಂ.ಕೆ.ಮಠ, ರಂಜಿತ್‌ ಗೌಡ, ತುಕಾಲಿ ಸಂತೋಷ್‌, ಹುಲಿ ಕಾರ್ತಿಕ್‌, ನಿರಂಜನ್‌, ಅನಂತ್‌, ಶಿಶಿರ್‌ ಶಾಸ್ತ್ರಿ, ಗೋಲ್ಡ್‌ ಸುರೇಶ್‌, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್‌, ನಮ್ರತಾ ಗೌಡ, ವಿನಯ್‌ ಗೌಡ, ಮೋಹನ್‌ ಕೃಷ್ಣರಾಜ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಸಂಗೀತ ಚಿತ್ರಕ್ಕಿದೆ.

Read more Articles on