ಆಪರೇಷನ್‌ ಡಿ ಚಿತ್ರದ ಟೀಸರ್‌ ಬಿಡುಗಡೆ

| Published : Oct 11 2024, 11:51 PM IST

ಸಾರಾಂಶ

ಆಪರೇಷನ್ ಡಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

ಹೊಸಬರ ‘ಆಪರೇಷನ್‌ ಡಿ’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಭಾರ್ಗವಿ ಮುರಳಿ ಹಾಗೂ ರಂಗನಾಥ್‌ ಬಿ ನಿರ್ಮಾಣದ ಈ ಚಿತ್ರವನ್ನು ತಿರುಮಲೇಶ್‌ ವಿ ನಿರ್ದೇಶಿಸಿದ್ದಾರೆ.

‘ಇದು ಸಸ್ಪೆನ್ಸ್‌, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕತೆಯನ್ನು ಆಧರಿಸಿರುವ ಚಿತ್ರ. ಮರ್ಡರ್ ಮಿಸ್ಟರಿ ಸಿನಿಮಾ ಆದರೂ ಒಂದೇ ಒಂದು ಕಡೆ ರಕ್ತ ಕಾಣುವುದಿಲ್ಲ ಹಾಗೂ ಆಕ್ಷನ್ ಸನ್ನಿವೇಶಗಳು ಇರಲ್ಲ. ಇದು ಚಿತ್ರದ ವಿಶೇಷ ಕೂಡ’ ಎಂದು ತಿರುಮಲೇಶ್‌ ವಿ ಹೇಳಿದರು.

ರುದ್ರೇಶ್‌ ಬೂದನೂರು, ಸುಹಾಸ್ ಆತ್ರೇಯ, ವಿನೋದ್‌ ದೇವ್‌, ಸ್ನೇಹ ಭಟ್‌, ಇಂಚರ ಭರತ್‌ ರಾಜ್‌, ಮಹೇಶ್‌ ಎಸ್‌ ಕಲಿ, ಶ್ರೀಧರ್‌, ಪೃಥ್ವಿ ಬನವಾಸಿ ನಟಿಸಿದ್ದಾರೆ.