ಕ್ರೇಜಿಸ್ಟಾರ್ ನಟನೆಯ ‘ಪರವಶ’ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ

| Published : Mar 06 2024, 02:17 AM IST

ಕ್ರೇಜಿಸ್ಟಾರ್ ನಟನೆಯ ‘ಪರವಶ’ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಪರವಶ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ಸಿನಿವಾರ್ತೆಕ್ರೇಜಿಸ್ಟಾರ್‌ ರವಿಚಂದ್ರನ್‌, ಸೋನಾಲ್‌ ಮೊಂತೆರೋ ಹಾಗೂ ರಘು ಭಟ್‌ ನಟನೆಯ ‘ಪರವಶ’ ಚಿತ್ರದ ಪೋಸ್ಟರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು.

ಹರೀಶ್‌ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುಧೀಂದ್ರ ನಾಡಿಗರ್‌ ನಿರ್ದೇಶಿಸುತ್ತಿದ್ದಾರೆ. ‘ನಾನು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ಚಿತ್ರೀಕರಣ ಮುಕ್ತಾಯ ಆಗಿದೆ. ಸುಧೀಂದ್ರ ನಾಡಿಗರ್‌ ನಿರ್ದೇಶನದ ಶೈಲಿ ವಿನೂತನವಾಗಿದೆ’ ಎಂದರು ಕ್ರೇಜಿಸ್ಟಾರ್‌ ರವಿಚಂದ್ರನ್‌.ಪವಿತ್ರಾ ಲೋಕೇಶ್‌, ರಾಜೇಶ್‌ ನಟರಂಗ, ಸುಜಯ್‌ ಶಾಸ್ತ್ರಿ, ಅನನ್ಯ ತಾರಾಬಳಗದಲ್ಲಿದ್ದಾರೆ. ರಘು ಭಟ್‌ ಕಥೆ, ಸಚಿನ್ ಬಸ್ರೂರ್‌ ಸಂಗೀತ, ಆನಂದ್‌ ಮೀನಾಕ್ಷಿ ಛಾಯಾಗ್ರಹಣ ಹಾಗೂ ಪ್ರತೀಕ್‌ ಶೆಟ್ಟಿ ಸಂಕಲನವಿರುವ ಈ ಚಿತ್ರದ ಗೀತೆಗಳನ್ನು ಪ್ರಮೋದ್‌ ಮರವಂತೆ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ.