ನೈಜ ಘಟನೆ ಆಧರಿತ ಸಿನಿಮಾ ಪರ್ಶು

| Published : Feb 22 2024, 01:49 AM IST

ಸಾರಾಂಶ

ನೈಜ ಘಟನೆಗಳನ್ನುಆಧರಿಸಿ ಪರ್ಶು ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಇದು ಕಬಡ್ಡಿ ಆಟಗಾರನ ನೋವಿನ ಜೀವನ ಕಥನ.

ಕನ್ನಡಪ್ರಭ ಸಿನಿವಾರ್ತೆ

ಕಬಡ್ಡಿ ಆಟಗಾರನ ದುರಂತ ಕತೆ ಹೇಳುವ ಚಿತ್ರದ ಹೆಸರು ‘ಪರ್ಶು’. ಇದು ಮೈಸೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಕತೆಯ ಸಿನಿಮಾ. ನಿರ್ದೇಶಕ ಸಿಂಪಲ್‌ ಸುನಿ, ಮಾಜಿ ಪೊಲೀಸ್‌ ಅಧಿಕಾರಿ, ನಟಿ ಸಪ್ತಮಿ ಗೌಡ ತಂದೆ ಹೆಚ್‌.ಸಿ. ಉಮೇಶ್‌, ಕಾಶಿನಾಥ್‌ ಪುತ್ರ ಅಭಿಮನ್ಯು ಚಿತ್ರದ ಟೈಟಲ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಹಲವು ವರ್ಷಗಳಿಂದ ಊರ್ವಶಿ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ರುದ್ರ ಶ್ರೀನಿವಾಶ್‌ ನಿರ್ದೇಶನ ಮಾಡಲಿದ್ದಾರೆ. ‘2014- 2015ರಲ್ಲಿ ಮೈಸೂರು ಭಾಗದ ರಾಜ್ಯಮಟ್ಟದ ಕಬಡ್ಡಿ ಆಟಗಾರನೊಬ್ಬನ ಜೀವನದಲ್ಲಿ ನಡೆದ ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ. ಕಬಡ್ಡಿ ಆಟಗಾರನ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕುಳುಹಿಸಿ ಆತನ ಜೀವನ ಮತ್ತು ಕುಟುಂಬದ ಬದುಕನ್ನೇ ಹೇಗೆ ಕಿತ್ತುಕೊಂಡರು ಎಂಬುದು ಚಿತ್ರದಲ್ಲಿ ನೋಡಬಹುದು’ ಎಂದು ರುದ್ರ ಶ್ರೀನಿವಾಸ್‌ ತಿಳಿಸಿದರು. ಪರಶುರಾಮ್‌ ನಿರ್ಮಾಣ ಮಾಡುವ ಮಾಡುವ ಜತೆಗೆ ಕಬಡ್ಡಿ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.