ಸಾರಾಂಶ
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ದಳಪತಿ 69’ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಬೀಸ್ಟ್ ನಂತರ ಮತ್ತೊಮ್ಮೆ ಈ ಜೋಡಿ ದೊಡ್ಡ ಪರದೆಯ ಮೇಲೆ ಮ್ಯಾಜಿಕ್ ಸೃಷ್ಟಿಸುವ ಭರವಸೆಯಲ್ಲಿದೆ.
ಸಿನಿವಾರ್ತೆ
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ತಮಿಳು ಸೂಪರ್‌ಸ್ಟಾರ್ ವಿಜಯ್ ನಟನೆಯ ಕೊನೆಯ ಚಿತ್ರ ‘ದಳಪತಿ 69’ಗೆ ಬಾಲಿವುಡ್ ನಟಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.
ಈ ಹಿಂದೆ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾಗೂ ಕರ್ನಾಟಕ ಕರಾವಳಿ ಮೂಲದ ಪೂಜಾ ನಾಯಕಿಯಾಗಿದ್ದರು. ಈ ಕುರಿತು ಕೆವಿಎನ್ ಸಂಸ್ಥೆ, ‘ಬೆರಗು ಹುಟ್ಟಿಸುವ ಜೋಡಿಯನ್ನು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ನಿಮ್ಮ ಮುಂದೆ ಕರೆತರುತ್ತಿದ್ದೇವೆ’ ಎಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೂಜಾ ಹೆಗ್ಡೆ, ‘ದಳಪತಿ ವಿಜಯ್ ಜೊತೆಗೆ ಹಿರಿತೆರೆಯಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡುವ ಭರವಸೆ ನನಗಿದೆ’ ಎಂದಿದ್ದಾರೆ.
ಸುಮಾರು 500 ಕೋಟಿ ರು. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ಹೆಚ್ ವಿನೋತ್ ನಿರ್ದೇಶಿಸುತ್ತಿದ್ದಾರೆ.