ಸಾರಾಂಶ
ಲಡಾಖ್ ಪರಿಸರವಾದಿಗಳಿಗೆ ಬೆಂಬಲ ಸೂಚಿಸಿ ಪ್ರಕಾಶ್ ರೈ ಅಲ್ಲಿಯೇ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಪ್ರಕಾಶ್ ರೈ ಲಡಾಖ್‌ನಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ‘ಲಡಾಖ್‌ನ ಹಕ್ಕುಗಳು ಮತ್ತು ಪರಿಸರವನ್ನು ರಕ್ಷಿಸಲು ಕ್ಲೈಮೇಟ್ ಫಾಸ್ಟ್ ಚಳವಳಿ ಮಾಡುತ್ತಿರುವ ಸೋನಮ್ ವಾಂಗ್ಚುಕ್ ಅವರನ್ನು ಬೆಂಬಲಿಸಿ ಲಡಾಖ್‌ನಲ್ಲೇ ನನ್ನ ಜನ್ಮದಿನ ಆಚರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಲಡಾಖ್‌ನ ಜನರ ಹಕ್ಕುಗಳು ಮತ್ತು ಇಲ್ಲಿನ ಪರಿಸರವನ್ನು ರಕ್ಷಿಸಲು ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ ಮಾರ್ಚ್ 6ರಿಂದ ‘ಕ್ಲೈಮೇಟ್ ಫಾಸ್ಟ್’ ಎಂಬ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆಂದೋಲನಕ್ಕೆ ಪ್ರಕಾಶ್ ರೈ ಬೆಂಬಲ ವ್ಯಕ್ತಪಡಿಸಿದ್ದಾರೆ.