ಪ್ರಥಮ್‌ ನಟನೆಯ ಫಸ್ಟ್ ನೈಟ್‌ ವಿತ್‌ ದೆವ್ವ ಚಿತ್ರದ ಟೀಸರ್‌ ರಿಲೀಸ್

| Published : Feb 28 2024, 02:30 AM IST

ಪ್ರಥಮ್‌ ನಟನೆಯ ಫಸ್ಟ್ ನೈಟ್‌ ವಿತ್‌ ದೆವ್ವ ಚಿತ್ರದ ಟೀಸರ್‌ ರಿಲೀಸ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಥಮ್‌ ಕಥೆ ಬರೆದು ನಟಿಸಿರುವ ಫಸ್ಟ್ ನೈಟ್‌ ವಿತ್‌ ದೆವ್ವ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.

ಕನ್ನಡಪ್ರಭ ಸಿನಿವಾರ್ತೆ

ಪ್ರಥಮ್ ನಾಯಕನಾಗಿ ನಟಿಸಿರುವ ‘ಫಸ್ಟ್‌ ನೈಟ್‌ ವಿತ್‌ ದೆವ್ವ’ ಸಿನಿಮಾದ ಟೀಸರ್‌ ಏ2 ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ನವೀನ್ ಬೀರಪ್ಪ ನಿರ್ಮಾಣದ ಹಾಗೂ ಪಿ.ವಿ.ಆರ್ ಸ್ವಾಮಿ ನಿರ್ದೇಶನದ ಚಿತ್ರದ ಟೀಸರನ್ನು ಬಿಗ್‌ಬಾಸ್‌ ಸ್ಪರ್ಧಿಗಳಾದ ತುಕಾಲಿ ಸಂತೋಷ್‌, ನಮೃತಾ ಬಿಡುಗಡೆ ಮಾಡಿದರು. ಸಿನಿಮಾ ಬಗ್ಗೆ ವಿವರ ನೀಡಿದ ನಾಯಕ ಪ್ರಥಮ್‌, ‘ಚಿತ್ರ ಆರಂಭವಾದ ತಕ್ಷಣ ಬರುವುದೇ ಮದುವೆ ದೃಶ್ಯ. ಬಹಳ ಆಸೆಯಿಂದ ಮದುವೆಯಾದ ಹುಡುಗನಿಗೆ ತನ್ನ ಮೊದಲ ರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರ ಒನ್‌ಲೈನ್‌. ಹಾಸ್ಯ, ಆ್ಯಕ್ಷನ್‌, ಹಾರರ್‌ ಸನ್ನಿವೇಶಗಳು ಚಿತ್ರದಲ್ಲಿವೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ’ ಎಂದರು. ನಿಖಿತಾ, ಜೀವಿತಾ ಹಾಗೂ ಸುಶ್ಮಿತಾ ಮೂವರು ನಾಯಕಿಯರು. ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ಹರೀಶ್ ರಾಜ್ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಹಾಗೂ ಛಾಯಾಗ್ರಾಹಕ ಪಿ‌ವಿಆರ್ ಸ್ವಾಮಿ, ನಿರ್ಮಾಪಕ ನವೀನ್ ಬೀರಪ್ಪ, ಸಂಗೀತ ನಿರ್ದೇಶಕ ಅದ್ವಿಕ್ ವರ್ಮ ಸುದ್ದಿಗೋಷ್ಠಿಯಲ್ಲಿದ್ದರು.