ಸಾರಾಂಶ
ಪ್ರಥಮ್ ಕಥೆ ಬರೆದು ನಟನೆಯ ಖ್ಯಾತ ಫೈಟ್ ಮಾಸ್ಟರ್ ಕೌರವ ವೆಂಕಟೇಶ್ ನಿರ್ದೇಶನದ ಸಿನಿಮಾ ಕೊಕೇನ್‌ಗೆ ಮುಹೂರ್ತ
ಪ್ರಥಮ್ ಕಥೆ ಬರೆದು ನಟಿಸಿರುವ ‘ಕೊಕೇನ್’ ಸಿನಿಮಾಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆದಿದೆ. ಖ್ಯಾತ ಫೈಟ್ ಮಾಸ್ಟರ್ ಕೌರವ ವೆಂಕಟೇಶ್ ಈ ಚಿತ್ರ ನಿರ್ದೇಶಿಸಿದ್ದಾರೆ. ಮೊದಲ ದೃಶ್ಯಕ್ಕೆ ನಟ, ನಿರ್ಮಾಪಕ ಬಿ ಸಿ ಪಾಟೀಲ್ ಕ್ಲಾಪ್ ಮಾಡಿದರು. ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಕ್ಯಾಮರಾಗೆ ಚಾಲನೆ ನೀಡಿದರು. ಇವರಿಬ್ಬರೂ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.
ನಿರ್ದೇಶಕ ಕೌರವ ವೆಂಕಟೇಶ್, ‘ಭರ್ಜರಿ ಮನರಂಜನೆ ನೀಡುವ ಚಿತ್ರ ಕೊಕೇನ್. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ’ ಎಂದರು.ಪ್ರಥಮ್, ‘ಹಾಸ್ಯ, ಆ್ಯಕ್ಷನ್‌ನಿಂದ ಸಮೃದ್ಧವಾಗಿರುವ ಈ ಸಿನಿಮಾದ ಸಬ್ಜೆಕ್ಟ್ ಕುತೂಹಲ ಹೆಚ್ಚಿಸುವಂತಿದೆ. ಕಥೆ ಮಹಿಳಾ ಪ್ರಧಾನವಾಗಿದೆ’ ಎಂದರು.
ಆರನ, ಅನ್ವಿತಿ ಶೆಟ್ಟಿ ನಾಯಕಿಯರು. ಗೋಕುಲ್, ಮುನಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ರವೀಂದ್ರನಾಥ್ ನಟಿಸುತ್ತಿದ್ದಾರೆ.