ಸಾರಾಂಶ
ಸಿನಿವಾರ್ತೆ : ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ಪ್ರೇಮಲೋಕ 2’ ಶೀಘ್ರದಲ್ಲೇ ಶುರುವಾಗಲಿದೆ. ‘ಚಿತ್ರದ ಸಿನಿಮಾದ ಕೆಲಸಗಳು ವೇಗ ಪಡೆದುಕೊಳ್ಳುತ್ತಿವೆ. ಶೀಘ್ರ ಈ ಸಿನಿಮಾ ಸೆಟ್ಟೇರಲಿದೆ’ ಎಂದು ನಟ ಮನೋರಂಜನ್ ರವಿಚಂದ್ರನ್ ಹೇಳಿದ್ದಾರೆ.
ಚಿತ್ರಕ್ಕೆ ತಮಿಳು ನಟಿ ತೇಜು ಅಶ್ವಿನಿ ನಾಯಕಿಯಾಗುವ ಸಾಧ್ಯತೆ ಇದೆ. ಆದರೂ ಈ ಕುರಿತು ಅವರು ಸ್ಪಷ್ಟವಾಗಿ ಏನೂ ಹೇಳಲಿಲ್ಲ. ‘ಇದು ತಂದೆಯವರ ಕನಸಿನ ಪ್ರಾಜೆಕ್ಟ್. ಅವರು ಈ ಬಗ್ಗೆ ಶೀಘ್ರ ಅಪ್‌ಡೇಟ್ ನೀಡಲಿದ್ದಾರೆ. ತಮಿಳಿನ ನಟಿ ತೇಜು ಅಶ್ವಿನಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಜನವರಿಯಲ್ಲಿ ಅವರ ಜೊತೆಗೆ ಒಂದು ಫೋಟೋಶೂಟ್ ನಡೆದಿತ್ತು ಅಷ್ಟೇ. ಅವರೇ ಫೈನಲ್ ಎಂದು ನಾವೆಲ್ಲೂ ಹೇಳಿಲ್ಲ. ಈ ವಿಚಾರದಲ್ಲಿ ತಂದೆ ರವಿಚಂದ್ರನ್ ಅವರ ನಿರ್ಧಾರವೇ ಅಂತಿಮ’ ಎಂದು ಹೇಳಿದ್ದಾರೆ.
‘ಹೊಸ ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತಿದ್ದೇನೆ. ಆದರೆ ಯಾವುದೇ ಹೊಸ ಸಿನಿಮಾ ಘೋಷಿಸುವುದಿದ್ದರೂ ಇನ್ನೆರಡು ತಿಂಗಳ ನಂತರ ಘೋಷಿಸುತ್ತೇನೆ’ ಎಂದು ಮನೋರಂಜನ್ ಸ್ಪಷ್ಟಪಡಿಸಿದ್ದಾರೆ.