ಕಸ್ಟಡಿ ಚಿತ್ರದಲ್ಲಿ ಪೊಲೀಸ್ ಪಾತ್ರ, ಹೆಸರು ದುರ್ಗಾಪರಮೇಶ್ವರಿ: ಪ್ರಿಯಾ

| Published : Oct 23 2024, 12:42 AM IST

ಕಸ್ಟಡಿ ಚಿತ್ರದಲ್ಲಿ ಪೊಲೀಸ್ ಪಾತ್ರ, ಹೆಸರು ದುರ್ಗಾಪರಮೇಶ್ವರಿ: ಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಭೀಮ ಚಿತ್ರದ ಖ್ಯಾತಿಯ ಪ್ರಿಯಾ ಷಟಮರ್ಶನ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಸ್ಟಡಿ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ.

ಕನ್ನಡಪ್ರಭ ಸಿನಿವಾರ್ತೆ

ದುನಿಯಾ ವಿಜಯ್‌ ಅವರ ‘ಭೀಮ’ ಸಿನಿಮಾದ ಗಿರಿಜಾ ಪಾತ್ರಧಾರಿ ಪ್ರಿಯಾ ಷಟಮರ್ಶನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಹೆಸರು ‘ಕಸ್ಟಡಿ’. ಕಾಕ್ರೋಜ್ ಸುಧೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಿಯಾ, ‘ಭೀಮ ಚಿತ್ರದಲ್ಲಿನ ಗಿರಿಜಾ ಪಾತ್ರಕ್ಕೆ ಪ್ರೇಕ್ಷಕರು ತೋರಿದ ಪ್ರೀತಿಗೆ ಧನ್ಯವಾದಗಳು. ಕಸ್ಟಡಿ ಚಿತ್ರದಲ್ಲೂ ನಾನು ಪೊಲೀಸ್‌ ಪಾತ್ರ ಮಾಡುತ್ತಿದ್ದೇನೆ. ಹೆಸರು ದುರ್ಗಾಪರಮೇಶ್ವರಿ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕತೆ ಈ ಚಿತ್ರದ್ದು’ ಎಂದು ಹೇಳಿದ್ದಾರೆ.

ಜೆ ಜೆ ಶ್ರೀನಿವಾಸ್ ನಿರ್ದೇಶನದ, ನಾಗೇಶ್‌ ಕುಮಾರ್‌ ಯು ಎಸ್‌ ನಿರ್ಮಾಣದ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಜೆ ಜೆ ಶ್ರೀನಿವಾಸ್‌, ‘ಇದು ಸೈಬರ್‌ ಕ್ರೈಮ್‌ ಕುರಿತ ಚಿತ್ರ. ಮೊಬೈಲ್ ಸುತ್ತ ಈ ಚಿತ್ರದ ಕತೆ ಸಾಗುತ್ತದೆ’ ಎಂದರು.

ನಾಗೇಂದ್ರ ಅರಸ್, ಚಿಂಗಾರಿ ಮಹಾದೇವ್, ಮ್ಯಾಜಿಕ್ ರಮೇಶ್, ಮಧು ಕೆ.ಆರ್ ಪೇಟೆ, ಪವನ್ ಕುಮಾರ್, ಆರಾಧ್ಯ, ಕುಮಾರ್ ಶ್ರೀನಿವಾಸಮೂರ್ತಿ, ವಿನ್ಯಾ, ಅಶ್ವಿತಾ, ಶಿವಕುಮಾರ್ ಆರಾಧ್ಯ, ತೇಜಸ್ವಿನಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.