ಸಾರಾಂಶ
ಮಿ.ರಾಣಿ ಸಿನಿಮಾದಲ್ಲಿ ಸೈಕೋ ಜಯಂತ್ ಆಧುನಿಕ ಹೆಣ್ಣಿನ ಪಾತ್ರದಲ್ಲಿ ನಟನೆ.
ಕನ್ನಡಪ್ರಭ ಸಿನಿವಾರ್ತೆ
ಮಧುಚಂದ್ರ ಆರ್ ನಿರ್ದೇಶನದ ‘ಮಿ.ರಾಣಿ’ ಸಿನಿಮಾದ ಟೀಸರ್ ಏ2 ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಸೈಕೋ ಜಯಂತ ಪಾತ್ರದಲ್ಲಿ ಖ್ಯಾತರಾಗಿರುವ ನಟ ದೀಪಕ್ ಸುಬ್ರಹ್ಮಣ್ಯ ಈ ಸಿನಿಮಾದಲ್ಲಿ ಗ್ಲಾಮರಸ್ ನಟಿಯೊಬ್ಬಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಕಾಮಿಡಿ ಎಂಟರ್‌ಟೇನರ್ ಆಗಿದೆ.ಸಿನಿಮಾ ಬಗ್ಗೆ ವಿವರ ನೀಡುವ ನಿರ್ದೇಶಕ ಮಧುಚಂದ್ರ, ‘ಹೀರೋ ಆಗಬೇಕು ಎಂದು ಸಿನಿಮಾ ರಂಗಕ್ಕೆ ಬರುವ ಹುಡುಗ ಆಕಸ್ಮಿಕವಾಗಿ ಹೀರೋಯಿನ್ ಆಗಿಬಿಟ್ಟರೆ ಏನಾಗಬಹುದು ಎಂಬುದನ್ನು ಕಾಮಿಡಿ ಜಾನರಾದಲ್ಲಿ ಹೇಳಿದ್ದೇವೆ’ ಎಂದಿದ್ದಾರೆ.