ಫೋರೆನ್ಸಿಕ್‌ ಡಿಟೆಕ್ಟಿವ್‌ ಆಗಿ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ ನಟಿ ರಚನಾ ಇಂದರ್‌.

ಕನ್ನಡಪ್ರಭ ಸಿನಿವಾರ್ತೆ

‘4ಎನ್‌6 ಸೈಕಲಾಜಿಕಲ್‌ ಥ್ರಿಲ್ಲರ್‌. ಪ್ರತೀ ಕ್ಷಣವೂ ಒಂದೊಂದು ಹಿಂಟ್‌ ಸಿಗುತ್ತಾ ಹೋಗುತ್ತೆ. ಮನಸ್ಸು ಕೊಂಚ ಅತ್ತಿತ್ತ ಹೋದರೂ ಲಿಂಕ್‌ ಮಿಸ್‌ ಆಗುತ್ತೆ. ನಾನು ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದಕ್ಕೆ ವಿಭಿನ್ನ ಬಾಡಿ ಲ್ಯಾಂಗೇಜ್‌, ಸೂಕ್ಷ್ಮ ಅಂಶಗಳನ್ನೂ ದಾಟಿಸಬೇಕಾದಂಥಾ ನಟನೆ ಬೇಕಿತ್ತು. ನಟಿಯಾಗಿ ಈ ಸಿನಿಮಾ ಬೇರೆ ಥರದ ಅನುಭವ ಕೊಟ್ಟಿದೆ’ ಎಂದು ನಟಿ ರಚನಾ ಇಂದರ್‌ ಹೇಳಿದ್ದಾರೆ. ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ‘4ಎನ್‌6’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಈ ಸಿನಿಮಾ ನಿರ್ದೇಶಿಸಲು ಮುಂದಾದಾಗ ನಿರ್ದೇಶಕ ದರ್ಶನ್‌ ಶ್ರೀನಿವಾಸ್‌ ಅವರಿಗೆ ಕೇವಲ 21 ವರ್ಷವಾಗಿತ್ತಂತೆ. ‘4ಎನ್‌6 ಅನ್ನು ವೇಗವಾಗಿ ಹೇಳಿದಾಗ ಫೋರೆನ್ಸಿಕ್ ಅಂತಾಗುತ್ತೆ. ನಾಲ್ಕು ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ’ ಎಂದು ದರ್ಶನ್‌ ಹೇಳಿದರು.ನಟಿ ಭವಾನಿ ಪ್ರಕಾಶ್‌ ಶಿಕಾರಿ ದೇವಿ ಎಂಬ ಮುಖ್ಯಪಾತ್ರದಲ್ಲಿದ್ದಾರೆ. ಕಲಾವಿದರಾದ ನವೀನ್‌ ಕುಮಾರ್‌, ಅದ್ಯಾ ಶೇಖರ್‌ ಇದ್ದರು. ಸಾಯಿ ಪ್ರೀತಿ ಚಿತ್ರದ ನಿರ್ಮಾಪಕಿ. ಕರಣ್‌ ಸಿಂಗ್‌ ಕಾರ್ಯಕಾರಿ ನಿರ್ಮಾಪಕ. ಚರಣ್ ತೇಜ್ ಛಾಯಾಗ್ರಹಣ, ಸತ್ಯಕಹಿ ಸಂಭಾಷಣೆ, ಸಾಯಿ ಸೋಮೇಶ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.